ಮುಲ್ಕಿ: ಮುಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಸಂಜೆ ವೇಳೆ ಸಿಡಿಲು ಸಹಿತ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿತ್ತು.
ಸಂಜೆ ಸುಮಾರು ಆರೂವರೆ ಗಂಟೆಗೆ ಮೋಡ ಕವಿದ ವಾತಾವರಣ ಉಂಟಾಗಿ ಭಾರಿ ಮಳೆ ಸುರಿದಿದೆ. ಈ ಸಂದರ್ಭ ವಾಹನ ಸವಾರರಿಗೆ, ಪ್ರಯಾಣಿಕರಿಗೆ ತೀವ್ರ ತೊಂದರೆ ಉಂಟಾಯಿತು. ಭಾರಿ ಮಳೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.
ಏಕಾಏಕಿ ಸುರಿದ ಮಳೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾಗೂ ಕಾರ್ನಾಡು ಮೀನು ಮಾರುಕಟ್ಟೆ ಬಳಿ ಕೃತಕ ನೆರೆ ಉಂಟಾಗಿ ಕೆಸರು ನೀರಿನಲ್ಲಿ ವಾಹನ ಸವಾರರು ಪರದಾಡುವಂತಾಯಿತು.
ಮುಲ್ಕಿ ತಾಲೂಕು ವ್ಯಾಪ್ತಿಯ ಕಿನ್ನಿಗೋಳಿ-ಹಳೆಯಂಗಡಿ ಪಕ್ಷಿಕೆರೆ ಅತಿಕಾರಿಬೆಟ್ಟು ಪಡುಪಣಂಬೂರು ಪ್ರದೇಶದಲ್ಲಿ ಸಂಜೆ ವೇಳೆ ಭಾರಿ ಮಳೆ ಸುರಿದಿದ್ದು ವಿದ್ಯುತ್ ಅಸ್ತವ್ಯಸ್ತಗೊಂಡಿದೆ.
ಅಕಾಲಿಕ ಮಳೆಯಿಂದ ಮುಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಈಗಾಗಲೇ ಕೃಷಿ ಹಾನಿ ಸಂಭವಿಸಿದ್ದು ಮತ್ತಷ್ಟು ಮಳೆಯಿಂದ ಗದ್ದೆಯಲ್ಲಿ ಬೈಹುಲ್ಲು ಒದ್ದೆಯಾಗಿ ಮೇವು ಕೊಳೆಯುವ ಭೀತಿ ಎದುರಾಗಿದೆ.
Kshetra Samachara
30/11/2021 09:46 pm