ಮಲ್ಪೆ: ಉಡುಪಿಯ ಮಲ್ಪೆ ಪರಿಸರದ ಸಮುದ್ರ ತೀರದಲ್ಲಿ 30 ಕೆ.ಜಿ. ತೂಕದ ಕಾಂಡೈ ಮೀನು ಮೀನುಗಾರರ ಬಲೆಗೆ ಬಿದ್ದಿದೆ.
ನವೀನ್ ಸಾಲ್ಯಾನ್ ಎಂಬವರ ದೋಣಿಯಲ್ಲಿ ಮೀನುಗಾರಿಕೆ ಸಂದರ್ಭ ಈ ಮೀನು ಬಿದ್ದಿದ್ದು, ಗಾತ್ರದಲ್ಲಿ
ಉದ್ದವಾಗಿ ಇರೋ ಮೀನನ್ನು ಮಲ್ಪೆ ಬಂದರಿನಲ್ಲಿ ಹರಾಜು ಹಾಕಿದಾಗ ಕೆ.ಜಿ.ಗೆ 170 ರೂ. ನಂತೆ ಮಾರಾಟವಾಗಿದೆ.
ಕಾಂಡೈ ಮೀನು ಸಣ್ಣ ಗಾತ್ರವಾಗಿದ್ದರೆ ಕೆ.ಜಿ.ಗೆ 220 ರೂ.ನಂತೆ ಮಾರಾಟವಾಗುತ್ತದೆ. ಆದರೆ, ದೊಡ್ಡ ಗಾತ್ರದ ಕಾಂಡೈ ಮೀನಿಗೆ ಅಷ್ಟೊಂದು ದರ ಇಲ್ಲ, ಅಂತಾರೆ ಸ್ಥಳೀಯ ಮೀನುಗಾರರು. ಭಾರಿ ಗಾತ್ರದ ಈ ಕಾಂಡೈ ಮೀನು ಮಲ್ಪೆ ಬಂದರಿನಲ್ಲಿ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು.
Kshetra Samachara
24/11/2021 12:40 pm