ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ವಿದ್ಯುತ್ ಕಂಬದ ಮೇಲೆ ಬಿದ್ದ ಮರ; ಇಬ್ಬರು ಪಾರು, ಸೊತ್ತು ಹಾನಿ

ಮುಲ್ಕಿ: ಮುಲ್ಕಿ ನಪಂ ವ್ಯಾಪ್ತಿಯ ಕೆಎಸ್ ರಾವ್ ನಗರ ವಿಜಯಪುರ ಕಾಲೊನಿಯಲ್ಲಿ ಶುಕ್ರವಾರ ಮಧ್ಯಾಹ್ನ ಏಕಾಏಕಿ ಭಾರಿ ಗಾತ್ರದ ಹೆಬ್ಬಲಸು ಮರ ವಿದ್ಯುತ್ ಕಂಬದ ಮೇಲೆಯೇ ಬಿದ್ದು ಇಬ್ಬರು ಪವಾಡಸದೃಶ ಪಾರಾಗಿದ್ದು, ಲಕ್ಷಾಂತರ ರೂ. ಹಾನಿ ಉಂಟಾಗಿದೆ.

ಕೆಎಸ್ ರಾವ್ ನಗರದ ವಿಜಯಪುರ ಕಾಲೊನಿಯ ಶಿವಯೋಗೀಶ್ವರ ಮಠದ ರಸ್ತೆಯಲ್ಲಿನ ಲಾಲಾ ಸಾಹೇಬ್ ಎಂಬವರ ಮಿನಿ ಹೋಟೆಲ್ ಪಕ್ಕದಲ್ಲಿ ಬೃಹತ್ ಹೆಬ್ಬಲಸು ಮರ ಏಕಾಏಕಿ ಉರುಳಿದೆ.

ಈ ಸಂದರ್ಭ ಹೋಟೆಲ್ ನಲ್ಲಿದ್ದ ಮುರ್ತಜಾ ಹಾಗೂ ಹೋಟೆಲಿನ ಎದುರು ಬದಿಯ ತುಳಸಿಗೇರಿ ಪ್ರಸನ್ನ ಎಂಬ ಅಂಗಡಿಯಲ್ಲಿದ್ದ ಮಹಿಳೆ ರುಕ್ಮಿಣಿ ಅವರು ವಿದ್ಯುತ್ ಆಘಾತದಿಂದ ಸ್ವಲ್ಪದರಲ್ಲಿಯೇ ಪಾರಾಗಿದ್ದಾರೆ.

ವಿದ್ಯುತ್ ಕಂಬಕ್ಕೆ ಮರ ಬೀಳುತ್ತಿದ್ದಂತೆಯೇ ಕಾಲೊನಿಯ ನಾಲ್ಕು ವಿದ್ಯುತ್ ಕಂಬಗಳು ಹಾಗೂ ಟ್ರಾನ್ಸ್‌ಫಾರ್ಮರ್ ತುಂಡಾಗಿ ಬಿದ್ದಿದ್ದು, ಲಕ್ಷಾಂತರ ರೂ. ನಷ್ಟವಾಗಿದೆ.

ಮರ ಹೋಟೆಲಿನ ಬದಿ ಇದ್ದುದರಿಂದ ಮರ ಬೀಳುವ ರಭಸಕ್ಕೆ ಹೋಟೆಲಿಗೂ ಹಾನಿಯಾಗಿದೆ.

ಅವಘಡ ನಡೆದ ಕೂಡಲೇ ಸ್ಥಳಕ್ಕೆ ಧಾವಿಸಿದ ಮುಲ್ಕಿ ನಪಂ ಸದಸ್ಯ ಮಂಜುನಾಥ ಕಂಬಾರ, ಮೆಸ್ಕಾಂ ಅಧಿಕಾರಿ ವಿವೇಕಾನಂದ ಶೆಣೈ ಮತ್ತು ಸಿಬ್ಬಂದಿ ಕ್ರೇನ್ ಮುಖಾಂತರ ಮರವನ್ನು ತೆರವುಗೊಳಿಸಲು ಸಹಕರಿಸಿದರು. ಮರ ಬಿದ್ದ ಬದಿಯಲ್ಲಿ ಇನ್ನೊಂದು ಮರ ಬೀಳುವ ಸ್ಥಿತಿಯಲ್ಲಿದ್ದು, ಅದನ್ನು ತೆರವುಗೊಳಿಸಲಾಗಿದೆ. ಈ ಸಂದರ್ಭ ವಿದ್ಯುತ್ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಸರಿಪಡಿಸಲು ಮೆಸ್ಕಾಂ ಸಿಬ್ಬಂದಿ ಶ್ರಮಿಸುತ್ತಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

12/11/2021 08:15 pm

Cinque Terre

18.71 K

Cinque Terre

0

ಸಂಬಂಧಿತ ಸುದ್ದಿ