ಉಡುಪಿ: ಉಡುಪಿಯ ಚಿನ್ನದಂಗಡಿಯೊಂದಕ್ಕೆ ವಿಶೇಷ ಅತಿಥಿಯ ಆಗಮನವಾಗಿತ್ತು. ಆದರೆ, ಈ ಅತಿಥಿ ಬಂಗಾರ ಖರೀದಿ ಮಾಡುವ ಬದಲಾಗಿ ಅಂಗಡಿಯವರನ್ನು ಕೆಲ ಹೊತ್ತು ಬೆಚ್ಚಿ ಬೀಳಿಸಿತು! ಈ ಅತಿಥಿ ಯಾರು ಅಂತೀರಾ? ದೊಡ್ಡ ಗಾತ್ರದ ಹೆಬ್ಬಾವು ಮಾರ್ರೇ!
ಉಡುಪಿ ನಗರದ ನೋವೆಲ್ಟಿ ಜ್ಯುವೆಲ್ಲರಿಯಲ್ಲಿ ಬೃಹತ್ ಹೆಬ್ಬಾವು ಪತ್ತೆಯಾಗಿ ಕೆಲ ಕಾಲ ಆತಂಕ ಸೃಷ್ಟಿ ಮಾಡಿದ ಘಟನೆ ನಡೆದಿದೆ. ಜ್ಯುವೆಲ್ಲರಿಯ ಮೇಲ್ಛಾವಣಿಯಲ್ಲಿ ಅವಿತು ಕುಳಿತಿದ್ದ ಹೆಬ್ಬಾವನ್ನು ನೋಡಿ ಭೀತಿಗೊಂಡ ಸಿಬ್ಬಂದಿ, ತಕ್ಷಣ ಉರಗ ತಜ್ಞ ಗುರುರಾಜ್ ಸನಿಲ್ ಅವರನ್ನು ಕರೆಸಿಕೊಂಡರು. ಸುಮಾರು 8 ಅಡಿಯಷ್ಟು ಉದ್ದವಿದ್ದ ಹೆಬ್ಬಾವನ್ನು ಸನಿಲ್ ಕೆಲ ಹೊತ್ತಿನಲ್ಲೇ ಹಿಡಿದರು.
ಬಳಿಕ ಹಾವನ್ನು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯುವುದರೊಂದಿಗೆ ಅಂಗಡಿ ಸಿಬ್ಬಂದಿ ಮತ್ತು ಗ್ರಾಹಕರು ನಿಟ್ಟುಸಿರು ಬಿಡುವಂತಾಯಿತು. ಆದರೆ, ಸುಸಜ್ಜಿತ ಜ್ಯುವೆಲರಿ ಶಾಪ್ ಗೆ ಇಷ್ಟೊಂದು ಗಾತ್ರದ ಹೆಬ್ಬಾವು ಹೇಗೆ ಪ್ರವೇಶ ಮಾಡಿತು ಎಂಬುದೇ ಅಚ್ಚರಿ ವಿಷಯ!.
Kshetra Samachara
12/11/2021 08:57 am