ಹೆಬ್ರಿ: ಹೆಬ್ರಿ ತಾಲೂಕಿನ ಕುಚ್ಚೂರು ಗ್ರಾಪಂ ವ್ಯಾಪ್ತಿಯಲ್ಲಿ ಚಿರತೆಯೊಂದು ದಾಳಿ ನಡೆಸಿ ಮಹಿಳೆಯನ್ನು ಗಾಯಗೊಳಿಸಿದ ಘಟನೆ ನಡೆದಿದೆ. ಇಲ್ಲಿನ ಕಾನ್ ಬೆಟ್ಟಿನ ದಯಾನಂದ ಭಟ್ ಎಂಬವರ ಮನೆಯ ತೋಟದ ಅಡಿಕೆ ಒಣಗಿಸುವ ಕೊಠಡಿಯಲ್ಲಿ ಈ ಚಿರತೆ ಪ್ರತ್ಯಕ್ಷಗೊಂಡು ಗಾಬರಿ, ಭೀತಿ ಉಂಟು ಮಾಡಿತ್ತು.
ಕಳೆದೆರಡು ದಿನಗಳಿಂದ ದಯಾನಂದ ಭಟ್ ಅವರ ಅಡಿಕೆ ಒಣಗಿಸುವ ಕೊಠಡಿಯಲ್ಲಿ ಮಲಗಿದ ಸ್ಥಿತಿಯಲ್ಲಿಯೇ ಬೀಡುಬಿಟ್ಟಿತ್ತು. ದಯಾನಂದ ಭಟ್ ಅವರ ಪತ್ನಿ ಹೂ ಕೊಯ್ಯಲು ಹೋದಾಗ ಚಿರತೆಯ ಹಠಾತ್ ದಾಳಿಗೆ ಉಗುರು ತಾಗಿ ಪರಚಿದ ಗಾಯಗಳಾಗಿವೆ. ಅವರಿಗೆ ಹೆಬ್ರಿಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಸ್ಥಳಕ್ಕೆ ಗ್ರಾಪಂ ಸದಸ್ಯ ಮಹೇಶ್ ಶೆಟ್ಟಿ ಜಡ್ಡು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಧಾವಿಸಿ ಚಿರತೆಯನ್ನು ಹಿಡಿಯಲು ಬೋನ್ ಅಳವಡಿಸಿದ್ದಾರೆ. ಕೆಲವು ದಿನಗಳಿಂದ ಕುಚ್ಚೂರು ಗ್ರಾಪಂ ವ್ಯಾಪ್ತಿಯಲ್ಲಿ ಹಲವೆಡೆ ಚಿರತೆ ಸಂಚಾರ ಕಂಡು ಬಂದಿದ್ದು, ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ.
Kshetra Samachara
09/11/2021 08:48 am