ಬೈಂದೂರು: ಸುಮಾರು ಹನ್ನೆರಡು ಅಡಿ ಉದ್ದದ ಬೃಹತ್ ಗಾತ್ರದ ಎರಡು ಹೆಬ್ಬಾವು ಕಾಣಿಸಿಕೊಂಡು ಸ್ಥಳೀಯರನ್ನು ಆತಂಕಕ್ಕೀಡುಮಾಡಿದ ಘಟನೆ ಬೈಂದೂರಿನಲ್ಲಿ ನಡೆದಿದೆ.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಮಯ್ಯಾಡಿಯಲ್ಲಿ ಕೃಷಿ ಗದ್ದೆ ಪಕ್ಕ ಹರಿಯುವ ನೀರಿನಲ್ಲಿ ಈ "ಜೋಡಿ" ಕಾಣಿಸಿಕೊಂಡಿದ್ದವು.
ಬಳಿಕ ಸ್ಥಳೀಯ ಯುವಕರಾದ ಸಚಿನ್ ಹಾಗೂ ನವೀನ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದು
ಹೆಬ್ಬಾವುಗಳೆರಡನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಿ ಬಿಡಲಾಯಿತು. ಸ್ಥಳಕ್ಕೆ ಬೈಂದೂರು ವಲಯ ಅರಣ್ಯ ಅಧಿಕಾರಿಗಳ ತಂಡ ಭೇಟಿ ನೀಡಿತು.
Kshetra Samachara
27/10/2021 09:39 pm