ಉಡುಪಿ: ಮಳೆ ನಿಂತರೂ ಮಳೆ ಹನಿ ನಿಂತಿಲ್ಲ ಎಂಬಂತೆ ,ಮಳೆಗಾಲ ಮುಗಿದಿದ್ದರೂ ಮಳೆ ಮಾತ್ರ ನಿಲ್ಲುತ್ತಿಲ್ಲ! ಇವತ್ತು ಬೆಳಿಗ್ಗಿನಿಂದಲೇ ಕೃಷ್ಣನಗರಿಯಲ್ಲಿ ಜಿಟಿಜಿಟಿ ಮಳೆಯಾಗುತ್ತಿದೆ.ತೀರ ಜೋರೂ ಅಲ್ಲದ ಈ ಮಳೆ ನಾನ್ ಸ್ಟಾಪ್ ಆಗಿ ಬರುತ್ತಲೇ ಇದೆ.ಹೀಗಾಗಿ ಬೆಳಿಗ್ಗೆ ಕೆಲಸ ಕಾರ್ಯಗಳಿಗೆ ಹೋಗುವವರಿಗೆ ತೊಡಕುಂಟಾಯಿತು.
ಇನ್ನು ಇವತ್ತು ವೀಕೆಂಡ್ ಬೇರೆ.ಜಿಟಿಜಿಟಿ ಮಳೆಯಿಂದಾಗಿ ಜನ ಹೊರಗಡೆ ಕಾಲಿಡುವಂತೆಯೂ ಇಲ್ಲ.ಹೀಗಾಗಿ ಬೆಳಿಗ್ಗಿನಿಂದ ಉಡುಪಿ ನಗರ ಜನರಿಲ್ಲದೆ ಬಿಕೋ ಎನ್ನುತ್ತಿದೆ.ಜಿಲ್ಲೆಯಾದ್ಯಂತ ಮೋಡ ಮುಸುಕಿದ ವಾತಾವರಣ ನೆಲೆಸಿದ್ದು,ಸದ್ಯಕ್ಕೆ ಈ ಮಳೆ ಬಿಡುವ ಲಕ್ಷಣ ಕಾಣಿಸುತ್ತಿಲ್ಲ.
Kshetra Samachara
23/10/2021 12:07 pm