ಮುಲ್ಕಿ: ಮುಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ಸುರಿದ ಭಾರಿ ಮಳೆ ಗಾಳಿ ಅಪಾರ ಕೃಷಿ ಹಾನಿ ಸಂಭವಿಸಿದ್ದು ಕೆಲಕಡೆ ಕೃತಕ ನೆರೆ ಉಂಟಾಗಿದೆ.
ಮುಲ್ಕಿ ತಾಲೂಕು ವ್ಯಾಪ್ತಿಯ ಶಿಮಂತೂರು ,ಅತಿಕಾರಿಬೆಟ್ಟು, ಹಳೆಯಂಗಡಿಯ ಪಾವಂಜೆ, ಪಡುಪಣಂಬೂರು, ಪಕ್ಷಿಕೆರೆ, ಪಂಜ, ಕಿನ್ನಿಗೋಳಿ, ಏಳಿಂಜೆ ಪ್ರದೇಶಗಳ ಕೆಲಕಡೆ ಕೃತಕ ನೆರೆ ಉಂಟಾಗಿ ಕೃಷಿ ಹಾನಿ ಸಂಭವಿಸಿದೆ.
ಕೆಲಕಡೆ ಭತ್ತದ ಪೈರು ನೀರಿನಲ್ಲಿ ಮುಳುಗಿದ್ದು ಬೆಳೆ ಮಾಡಿದ ರೈತ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವ ಪರಿಸ್ಥಿತಿ ಬಂದಿದೆ.
ಕೃಷಿಕ ಪ್ರವೀಣ್ ಶಿಮಂತೂರು ಮಾತನಾಡಿ ಈ ಬಾರಿ ಸಾವಯವ ಕೃಷಿ ಮೂಲಕ ಒಳ್ಳೆಯ ಭತ್ತದ ಫಸಲು ಬಂದಿದ್ದು ಮಳೆಗೆ ಕೃಷಿ ಹಾನಿ ಸಂಭವಿಸಿದೆ.
ಭಾರಿ ಮಳೆಗೆ ಮುಲ್ಕಿ ಇತಿಹಾಸ ಪ್ರಸಿದ್ಧ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಒಳಾಂಗಣ ಹಾಗೂ ಹೊರಾಂಗಣದಲ್ಲಿ ನೀರು ಬಂದಿದ್ದು ಭಕ್ತರಿಗೆ ತೀವ್ರ ತೊಂದರೆ ಉಂಟಾಯಿತು.
Kshetra Samachara
13/10/2021 02:35 pm