ಮಲ್ಪೆ: ಮಲ್ಪೆ ಬೀಚಿಗೆ ಬಂದಿದ್ದ ಮೂವರು ಪ್ರವಾಸಿ ವಿದ್ಯಾರ್ಥಿಗಳನ್ನು ಲೈಫ್ ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿದ ಘಟನೆ ಇವತ್ತು ನಡೆದಿದೆ. ಶಿವಮೊಗ್ಗದಿಂದ 35 ಮಂದಿ ಇದ್ದ ವಿದ್ಯಾರ್ಥಿಗಳ ತಂಡ ಮಲ್ಪೆ ಬೀಚಿಗೆ ಪ್ರವಾಸಕ್ಕೆಂದು ಬಂದಿದ್ದರು. ಈ ವೇಳೆ ಮೂವರು ವಿದ್ಯಾರ್ಥಿಗಳು ಸಮುದ್ರದ ಆಳಕ್ಕೆ ಹೋಗಿ ಅಪಾಯವನ್ನು ಆಹ್ವಾನಿಸಿಕೊಂಡಿದ್ದರು. ತಕ್ಷಣ ಅಲ್ಲಿದ್ದ ಲೈಫ್ ಗಾರ್ಡ್ ನವರು ಮೂವರು ವಿದ್ಯಾರ್ಥಿಗಳನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಕಿರಣ್ , ನಿತಿನ್ ಮತ್ತು ಮಂಜುನಾಥ್ ರಕ್ಷಣೆಗೊಳಗಾದ ವಿದ್ಯಾರ್ಥಿಗಳಾಗಿದ್ದಾರೆ.
Kshetra Samachara
22/09/2021 05:20 pm