ಕೊಲ್ಲೂರು : ಇವತ್ತು ಬೆಳ್ಳಂಬೆಳಿಗ್ಗೆ ಕೊಲ್ಲೂರಿಗೆ ಎಂಟ್ರಿ ಕೊಟ್ಟಿದ್ದು ಬರೋಬ್ಬರಿ 12 ಅಡಿ ಉದ್ದದ ಕಾಳಿಂಗ ಸರ್ಪ! ಬೃಹತ್ ಆಕಾರದ ಈ ಬ್ಲಾಕ್ ಕೋಬ್ರಾ ಕಂಡು ಜನಬೆಚ್ಚಿಬಿದ್ದಿದ್ದಾರೆ.ಈ ವಿಷ ಪೂರಿತ ಘಟಸರ್ಪವನ್ನು ಕಂಡ ತಕ್ಷಣ ಮನೆಮಂದಿ ಬೆಚ್ಚಿಬಿದ್ದು ಅರಣ್ಯ ಇಲಾಖೆಗೆ ಕರೆ ಮಾಡಿದ್ದಾರೆ.ಈ ಕಿಂಗ್ ಕೋಬ್ರಾವನ್ನು ಹಿಡಿಯೋದು ಅಷ್ಟು ಸುಲಭದ ಮಾತಾಗಿರಲ್ಲ. ಅರಣ್ಯ ಇಲಾಖೆಯ ಸಿಬ್ಬಂದಿಗಳು ಕೂಡಲೇ ಉರಗ ತಜ್ಞ ಶಂಕರ್ ಪೂಜಾರಿ ಮತ್ತು ಪ್ರದೀಪ್ ಕುಂದಾಪುರ ಅವರನ್ನು ಈ ಕಾರ್ಯಾಚರಣೆಗೆ ಕರೆಸಿಕೊಂಡಿದ್ದಾರೆ.
ಈ ಹಿಂದೆ ಹಲವಾರು ಕಾಳಿಂಗಸರ್ಪ ಗಳನ್ನು ಹಿಡಿದು ಅನುಭವವಿದ್ದ ಶಂಕರ್ ಪೂಜಾರಿ ಅವರು ಅತ್ಯಂತ ಜಾಣತನದಿಂದ ಈ ಹಾವನ್ನು ಹಿಡಿದು ಗೋಣಿಗೆ ತುಂಬಿಸಿದ್ದಾರೆ.
ಭಾರೀ ಗಾತ್ರದ ಕಾಳಿಂಗ ಸರ್ಪ ತಪ್ಪಿಸಿಕೊಳ್ಳುವ ಕೊನೆಯ ಪ್ರಯತ್ನವಾಗಿ ಗೋಣಿಗೆ ಹಾಕುವ ಸಂದರ್ಭದಲ್ಲಿ ಅನಿರೀಕ್ಷಿತ ದಾಳಿ ಮಾಡಿದೆ. ಆದರೆ ಈ ಬಗ್ಗೆ ಸಾಕಷ್ಟು ಅನುಭವವಿದ್ದ ಶಂಕರ್ ಪೂಜಾರಿ ಅವರು ತಕ್ಷಣವೇ ತನ್ನ ಕೈಯನ್ನು ಹಿಂದಕ್ಕೆ ಎಳೆದುಕೊಂಡು ಭಾರಿ ಅನಾಹುತದಿಂದ ಪಾರಾಗಿದ್ದಾರೆ. ಇದೇ ಪ್ರದೇಶದಲ್ಲಿ ಕಾಳಿಂಗಸರ್ಪಗಳ ಬಗ್ಗೆ ಅಧ್ಯಯನವೂ ನಡೆಯುತ್ತಿದೆ ಎಂಬುದು ಗಮನಾರ್ಹ.
ಜನರನ್ನು ಬೆಚ್ಚಿ ಬೀಳಿಸಿದ ಈ ಕಾಳಿಂಗ ಸರ್ಪವನ್ನು ಕೊನೆಗೆ ಕೊಲ್ಲೂರು ಮೂಕಾಂಬಿಕಾ ರಕ್ಷಿತಾರಣ್ಯದಲ್ಲಿ ಬಿಡುವುದರೊಂದಿಗೆ ಸ್ಥಳೀಯರು ನಿಟ್ಟುಸಿರಿಟ್ಟರು.
Kshetra Samachara
20/09/2021 08:41 pm