ಮುಲ್ಕಿ: ಜಿಲ್ಲಾಡಳಿತದ ಆದೇಶದಂತೆ ಕೊರೊನಾ ವಿಕೆಂಡ್ ಕರ್ಫ್ಯೂ ಮುಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಶನಿವಾರ ಮಳೆಯಲ್ಲಿ ನಿಶಬ್ದವಾಯಿತು.
ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಬಿರುಸಿನ ವ್ಯಾಪಾರ ನಡೆದಿದ್ದು ಮಧ್ಯಾಹ್ನ 2 ಗಂಟೆ ಬಳಿಕ ಎಲ್ಲಾ ಅಂಗಡಿಗಳು ಮುಚ್ಚಿದ್ದು ಮೆಡಿಕಲ್ ಮತ್ತು ಹೋಟೆಲ್ ಮಾತ್ರ ತೆರೆದಿತ್ತು.
ರಾಷ್ಟ್ರೀಯ ಹೆದ್ದಾರಿ 66ರ ಮಂಗಳೂರು ಉಡುಪಿ ತಡೆರಹಿತ ಬಸ್ಸು ಸಂಚಾರ, ಅನ್ಯ ರಾಜ್ಯಗಳ ಸರಕಾರಿ ಬಸ್ಸು ಹಾಗೂ ಕಟೀಲು ಕಿನ್ನಿಗೋಳಿ ಕಡೆಗೆ ಸರ್ವಿಸ್ ಬಸ್ಸುಗಳ ಸಂಚಾರ ಎಂದಿನಂತೆ ಇದ್ದರೂ ಬಸ್ಸಿನಲ್ಲಿ ಪ್ರಯಾಣಿಕರ ಕೊರತೆ ಎದ್ದು ಕಾಣುತ್ತಿತ್ತು.
ಮುಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಬೆಳಗ್ಗೆ ಹಾಗೂ ಸಂಜೆ ಹೊತ್ತು ಬಿರುಸಿನ ಮಳೆಯಾಗಿದೆ.
ಮುಲ್ಕಿ ತಾಲ್ಲೂಕು ವ್ಯಾಪ್ತಿಯ ಪಕ್ಷಿಕೆರೆ ಹಳೆಯಂಗಡಿ ಕಿನ್ನಿಗೋಳಿ ಬಳಕುಂಜೆ ಅತಿಕಾರಿಬೆಟ್ಟು ಪ್ರದೇಶಗಳಲ್ಲಿ ಕೊರೊನಾ ವೀಕೆಂಡ್ ಕರ್ಫ್ಯೂ ಯಶಸ್ವಿಯಾಗಿದ್ದರೂ ಹೆದ್ದಾರಿ ಹಾಗೂ ಒಳಪೇಟೆ ದ್ವಿಚಕ್ರ ಹಾಗೂ ಇತರೆ ವಾಹನಗಳಲ್ಲಿ ಅನಗತ್ಯ ತಿರುಗಾಟ ಎಂದಿನಂತೆ ಇತ್ತು.
ವೀಕೆಂಡ್ ಕರ್ಫ್ಯೂ ನಡುವೆಯೂ ಮುಲ್ಕಿ ಪೊಲೀಸರು ಇನ್ಸ್ಪೆಕ್ಟರ್ ಕುಸುಮಾಧರ ನೇತೃತ್ವದಲ್ಲಿ ಕರ್ತವ್ಯವನ್ನು ಮುಂದುವರೆಸಿದ್ದು ಪ್ರತಿ ಗ್ರಾಮಕ್ಕೆ ತೆರಳಿ ಮಹಿಳಾ ಜನ ಜಾಗೃತಿ ಮೂಡಿಸುತ್ತಿದ್ದರು.
ಶನಿವಾರ ಮುಲ್ಕಿ ತಾಲೂಕಿನ ಪಡುಪಣಂಬೂರು ಗ್ರಾಪಂ ವ್ಯಾಪ್ತಿಯ 10ನೇ ತೋಕೂರುನಲ್ಲಿ 1,ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ತಾಳಿಪಾಡಿಯಲ್ಲಿ 1, ಐಕಳ ಗ್ರಾಪಂನ ಉಳೆಪಾಡಿಯಲ್ಲಿ 1 ಸೇರಿದಂತೆ ಒಟ್ಟು 3 ಪೊಸಿಟಿವ್ ಪ್ರಕರಣ ದಾಖಲಾಗಿದೆ
Kshetra Samachara
28/08/2021 11:07 pm