ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಡಬ: ಹಾವನ್ನೇ ಸೋಲಿಸಿದ ಇಲಿ!; ಅವಕ್ಕಾದ ಜನ

ಕಡಬ: ಸಾಮಾನ್ಯವಾಗಿ ಹಾವುಗಳು ಇಲಿ ಹಿಡಿಯುವುದನ್ನು, ಹಾಗೇ ಗುಳುಂ ಮಾಡಿದ್ದನ್ನು ನೋಡಿದ್ದೇವೆ. ಆದರೆ, ಇಲ್ಲಿ ಮಾತ್ರ ನೇರ ವಿರುದ್ಧ ಘಟನೆಯೇ ನಡೆದು ಇಲಿಯೊಂದು ಹಾವನ್ನೇ ಹಿಡಿದಿದೆ!

ಕಡಬ- ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಕಳಾರ ಎಂಬಲ್ಲಿ ಇಲಿಯೊಂದು ಹಾವಿನೊಂದಿಗೆ ಕಾದಾಡಿ ಕೊನೆಗೆ ಹಾವನ್ನೇ ಹಿಡಿದುಕೊಂಡು ಪೊದೆಯೊಳಗೆ ಹೋಗಿದೆ.

ಕಳಾರದ ಗಣೇಶ್ ಎಂಬವರ ದಿನಸಿ ಅಂಗಡಿಯ ಮುಂದೆ ಸೋಮವಾರ ಸಂಜೆ ಸುಮಾರು ಐದು ಗಂಟೆ ವೇಳೆಗೆ ಕೇರೆ ಹಾವಿನ ಮರಿಯಂತಿದ್ದ ಹಾವಿನೊಂದಿಗೆ ಇಲಿ ಕಾದಾಡಿ, ಗೆದ್ದಿದೆ. ಗಣೇಶ್ ಅವರ ಅಂಗಡಿಯಲ್ಲಿದ್ದ ಗ್ರಾಹಕರೋರ್ವರು ಈ ಅಪರೂಪದ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಇದೀಗ ವೈರಲ್ ಆಗಿರುವ ವೀಡಿಯೊ ಕಂಡವರು ಇಲಿಯ ಧೈರ್ಯ, ಸಾಹಸ ಕಂಡು ಅವಕ್ಕಾಗಲೇ ಬೇಕಲ್ಲವೇ?

Edited By : Shivu K
Kshetra Samachara

Kshetra Samachara

02/11/2021 04:51 pm

Cinque Terre

11.5 K

Cinque Terre

2

ಸಂಬಂಧಿತ ಸುದ್ದಿ