ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೆಬ್ರಿ : ಕೊರಗಜ್ಜನ ಸನ್ನಿಧಾನದಲ್ಲಿ ಅಚ್ಚರಿ : ಹಾವಿನ ಚಿತ್ರ ಮೂಡಿದ್ದಾದರೂ ಹೇಗೆ?

ಹೆಬ್ರಿ : ಹೆಬ್ರಿ ತಾಲೂಕಿನ ಶಿವಪುರ ಸಮೀಪದ ಕೊರಗಜ್ಜನ ಕ್ಷೇತ್ರದಲ್ಲಿ ಅಚ್ಚರಿಯೊಂದು ನಡೆದಿದೆ. ಶಿವಪುರ ಕೊರಗಜ್ಜನ ಕ್ಷೇತ್ರದಲ್ಲಿ ಮಂಗಳವಾರ ಬೆಳಿಗ್ಗೆ ಗುಡಿಯ ತೆಂಗಿನ ಮರದ ಸಮೀಪ ನೆಲದಲ್ಲಿ ಹುತ್ತದ ಮಣ್ಣಿನಿಂದ ಇರುವೆಗಳು ನಾಗರಹಾವು ಹೋಲುವ ಚಿತ್ರ ಮೂಡಿಸಿರುವುದು ಸದ್ಯ ಅಚ್ಚರಿಗೆ ಕಾರಣವಾಗಿದೆ.

ಈಗ ಅಚ್ಚರಿ ವೀಕ್ಷಿಸಲು ಭಕ್ತಾದಿಗಳು ತಂಡೋಪ ತಂಡವಾಗಿ ಕೊರಗಜ್ಜನ ಸನ್ನಿಧಾನಕ್ಕೆ ಬರುತಿದ್ದಾರೆ. ಕ್ಷೇತ್ರದ ಮುಖ್ಯಸ್ಥ ಪುನೀತ್ ಅವರಿಗೆ ಮುಂಜಾನೆ ವೇಳೆ ಅತ್ತಿತ್ತ ಸುತ್ತಾಡುವ ನಾಗರ ಹಾವಿನ ಕನಸು ಕೂಡ ಬಿದ್ದಿದೆಯಂತೆ.

ಬೆಳಗ್ಗೆ ಎದ್ದು ನೋಡುವಾಗ ಸನ್ನಿದಾನದ ಸಮೀಪದಲ್ಲೆ ಹಾವಿನ ರಚನೆಯು ಕಂಡಿದೆ. ಇದೊಂದು ಕೊರಗಜ್ಜನ ಮಹಿಮೆ ಎಂದು

ಪುನೀತ್ ಹೇಳುತ್ತಾರೆ.

ಒಟ್ಟಾರೆ ಈ ಅಚ್ಚರಿ ನೋಡಲು ನೂರಾರು ಜನರು ಕ್ಷೇತ್ರದತ್ತ ಆಗಮಿಸುತ್ತಿದ್ದು ವಿಶೇಷವಾಗಿ ಪೂಜೆ ಸಲ್ಲಿಸುತ್ತಿದ್ದಾರೆ.

Edited By :
PublicNext

PublicNext

28/04/2022 02:51 pm

Cinque Terre

43.41 K

Cinque Terre

2

ಸಂಬಂಧಿತ ಸುದ್ದಿ