ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ಕೆ.ಎಸ್ ರಾವ್ ನಗರಕ್ಕೆ ಹೋಗುವ ಪ್ರಧಾನ ರಸ್ತೆಯಲ್ಲಿ ಬಾರಿ ಗಾತ್ರದ ಮರ ಬಿದ್ದು ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತು.
ಕಿಲ್ಪಾಡಿ ಗ್ರಾಮ ಪಂಚಾಯತ್ ಬಳಿಯ ಕೆಎಸ್ ರಾವ್ ನಗರಕ್ಕೆ ಹೋಗುವ ಜಂಕ್ಷನ್ ಬಳಿಯಲ್ಲಿ ದುರ್ಗಾ ಪ್ರಸಾದ್ ಎಂಬವರ ಮನೆಗೆ ಸಂಪರ್ಕ ಕಲ್ಪಿಸುವ ವಿದ್ಯುತ್ ತಂತಿಯ ಮೇಲೆ ಭಾರಿ ಗಾತ್ರದ ಮರ ಬಿದ್ದ ಪರಿಣಾಮ ಮನೆಗೆ ಭಾಗಶ ಹಾನಿಯಾಗಿದೆ.
ಮರ ಬಿದ್ದ ಕೂಡಲೇ ಸ್ಥಳಕ್ಕೆ ಧಾವಿಸಿದ ಮುಲ್ಕಿ ನಗರ ಪಂಚಾಯತ್ ಮಾಜಿ ಸದಸ್ಯ ಬಶೀರ್ ಕುಳಾಯಿ, ಕೆಮ್ರಾಲ್ ಗ್ರಾಪಂ ಮಾಜೀ ಅಧ್ಯಕ್ಷೆ ರೇವತಿ, ಸ್ಥಳೀಯರಾದ ಅಣ್ಣು ಮೇಸ್ತ್ರಿ ಹಾಗೂ ಮುಲ್ಕಿ ಮೆಸ್ಕಾಂ ಸಿಬ್ಬಂದಿ ಮರತೆರವುಗೊಳಿಸಲು ಸಹಕರಿಸಿದರು. ಮರ ಬಿದ್ದ ರಭಸಕ್ಕೆ ರಸ್ತೆಯಲ್ಲಿ ಶಾಲೆಗೆ ಹೋಗುತ್ತಿದ್ದ ಮಕ್ಕಳು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಈ ಭಾಗದಲ್ಲಿ ಇನ್ನೂ ಅನೇಕ ಅಪಾಯಕಾರಿ ಮರಗಳಿದ್ದು ಕೂಡಲೇ ತರವು ಉಳಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
Kshetra Samachara
02/07/2022 12:38 pm