ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗರುಡನಿಗೆ ಹೊಸ ಬದುಕು: ಜೀವನ್ಮರಣ ಸ್ಥಿತಿಯಲ್ಲಿದ್ದ ಪಕ್ಷಿರಾಜನಿಗೆ ಸಹೃದಯರಿಂದ ಆರೈಕೆ

ಉಡುಪಿ: ಅಸ್ವಸ್ಥಗೊಂಡು ಅಸಹಾಯಕ ಸ್ಥಿತಿಯಲ್ಲಿ ಕಂಡು ಬಂದಿರುವ ಗರುಡ ಪಕ್ಷಿಯನ್ನು ಉಡುಪಿ ಜಿಲ್ಲಾ ನಾಗರಿಕ ಸಮಿತಿ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ರಕ್ಷಿಸಿದ್ದಾರೆ.

ಆಹಾರ ಇಲ್ಲದೆ ಬಳಲಿರುವ ಗರುಡಕ್ಕೆ ಮಾಂಸ ಆಹಾರ ಒದಗಿಸಿ, ನಿತ್ರಾಣದಿಂದ ಚೇತರಿಸಿಕೊಂಡ ಬಳಿಕ, ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದಾರೆ.

ಉಡುಪಿಯ ಸಿಟಿ ಬಸ್ ನಿಲ್ದಾಣದಲ್ಲಿ ಬೆಳಗ್ಗಿನ ಸಮಯ ಹಾರಲಾಗದೆ ಈ ಗರುಡ ಅಸಹಾಯಕ ಸ್ಥಿತಿಯಲ್ಲಿತ್ತು.

ಸಮಿತಿಯ ರಕ್ಷಣೆಯಲ್ಲಿದ್ದ ಗರುಡವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಸಂದರ್ಭದಲ್ಲಿ ಉಪ ವಲಯ ಅರಣ್ಯಾಧಿಕಾರಿ ಗುರುರಾಜ್ ಕಾವ್ರಾಡಿ, ಅರಣ್ಯ ವೀಕ್ಷಕ ಪರಶುರಾಮ ಮೇಟಿ, ಅರಣ್ಯ ಸಿಬ್ಬಂದಿ ಜೋಯ್ ಉಪಸ್ಥಿತರಿದ್ದರು.

Edited By : Nirmala Aralikatti
Kshetra Samachara

Kshetra Samachara

24/09/2020 01:11 pm

Cinque Terre

29.12 K

Cinque Terre

0