ಬ್ರಹ್ಮಾವರ: ಅನಾಥ ಗೋವುಗಳ ಸಂರಕ್ಷಣೆಯ ಒಂದು ಕೇಂದ್ರ ಬ್ರಹ್ಮಾವರ ತಾಲೂಕು ನಂಚಾರಿನ ಕಾಮಧೇನು ಗೋಶಾಲೆ. ಇಲ್ಲಿನ ರಾಜೇಂದ್ರ ಚಕ್ಕೇರಾ ಮತ್ತು ಲಲಿತಾ ಚಕ್ಕೇರಾ ದಂಪತಿಗೆ ಮಕ್ಕಳಿಲ್ಲ ಎನ್ನುವ ಕೊರಗಿಗೆ ಅವರು ಕಂಡುಕೊಂಡದ್ದು ಗೋ ಸಂತತಿಯ ರಕ್ಷಣೆ. 20 ಗೋವನ್ನು ಸಾಕಿ ಉತ್ತಮ ಹೈನುಗಾರ ಎನ್ನುವ ಪ್ರಶಸ್ತಿಗೆ ಭಾಜನರಾದ ಗೋಪ್ರೇಮಿ ಈ ದಂಪತಿ .
ಕಟುಕರ ಕೈಗೆ ಸಿಕ್ಕಿ ವಧೆಯಿಂದ ಹಿಂಸೆ ಅನುಭವಿಸುವ ಗೋವುಗಳ ಆಕ್ರಂದನ ಇವರಿಗೆ ಗೋ ರಕ್ಷಣೆ ಮಾಡಲು ಸ್ಪೂರ್ತಿ. 8 ತಿಂಗಳ ಹಿಂದೆ ಇವರದೆ 6 ಎಕರೆ ಜಾಗದಲ್ಲಿ ಗೋವುಗಳನ್ನು ರಕ್ಷಣೆ ಮಾಡಲು ಶೆಡ್ ಮಾಡಿದ್ದಾರೆ. ಗೋವುಗಳಿಗೆ ಕುಡಿಯಲು ಸಾಕಷ್ಟು ನೀರಿದೆ. ದೇಶಿ ಮತ್ತು ವಿದೇಶಿ ತಳಿಗಳ 100 ಗೋವುಗಳಿ ಈಗ ಇಲ್ಲಿವೆ.
ಇವರದೆ ಜಾಗದಲ್ಲಿ ಬೆಳೆದ ಹಸಿ ಹುಲ್ಲು, ಖರೀದಿಸುವ ಒಣ ಹುಲ್ಲು ಮತ್ತು ಕೆಲಸಗಾರರ ಖರ್ಚು ಎಲ್ಲ ಸೇರಿ ಪ್ರತಿ ದಿನಕ್ಕೆ 6,000 ರೂ ಬೇಕು. ಗೊಬ್ಬರಕ್ಕೆ ಮತ್ತು ಗೋಬರ್ ಗ್ಯಾಸ್‌ಗೆ ಗೋವಿನ ಸಗಣಿ ಹೊರತಾಗಿ ಬೇರೇ ಎನೂ ಲಾಭ ಇಲ್ಲ. ಅನಾಥ ಗೋವನ್ನು ತಂದು ನೀಡಿದಲ್ಲಿ ಬದುಕುವಷ್ಟು ಕಾಲ ರಕ್ಷಣೆ ಪಡೆಯಲಿದೆ ಗೋ ಸಂತತಿ.
ಇವರ ಗೋ ರಕ್ಷಣಾ ಸೇವಾ ಕಾರ್ಯಕ್ಕೆ ಸಾರ್ವಜನಿಕರು ಗೋ ಪ್ರೇಮಿಗಳು ಸ್ಪಂದಿಸಬೇಕಾಗಿದೆ.
ಸಂಪರ್ಕ ಸಂಖ್ಯೆ :9481823469
PublicNext
28/09/2022 08:16 am