ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ತೆರೆದ ಬಾವಿಗೆ ಬಿದ್ದ ದನವನ್ನು ರಕ್ಷಿಸಿದ ಉಡುಪಿ ಅಗ್ನಿಶಾಮಕ ದಳ

ಉಡುಪಿ: ಜಿಲ್ಲೆಯ ಉದ್ಯಾವರದಲ್ಲಿ ತೆರೆದ ಬಾವಿಗೆ ಬಿದ್ದ ದನವನ್ನು ಉಡುಪಿಯ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

ಉದ್ಯಾವರದ ಕೆಮ್ ತೂರು ಶಾರದಾ ಭಜನಾ ಮಂಡಳಿಯ ಸಮೀಪ ತೆರೆದ ಬಾವಿಗೆ ಈ ದನ ಬಿದ್ದಿತ್ತು. ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಧಾವಿಸಿ ಬಂದ ಉಡುಪಿ ಜಿಲ್ಲಾ ಅಗ್ನಿಶಾಮಕ ದಳದ ಸಿಬ್ಬಂದಿ, ಬಾವಿಗೆ ಹಗ್ಗ ಇಳಿಸಿ ಉಪಾಯದಿಂದ ದನವನ್ನು ಮೇಲೆ ಹಾಕುವ ಮೂಲಕ ರಕ್ಷಣೆ ಮಾಡಿದ್ದಾರೆ. ಸದ್ಯ ದನ ಆರೋಗ್ಯವಾಗಿದ್ದು ಆರೈಕೆ ಮಾಡಲಾಗಿದೆ. ಕಾರ್ಯಾಚರಣೆಯು ಉಡುಪಿ ಅಗ್ನಿಶಾಮಕ ಠಾಣಾಧಿಕಾರಿ ಸತೀಶ್ ನೇತೃತ್ವದಲ್ಲಿ ನಡೆಯಿತು.

Edited By : Manjunath H D
Kshetra Samachara

Kshetra Samachara

03/08/2022 09:44 pm

Cinque Terre

8.45 K

Cinque Terre

0