ಕಾಪು: ಮರದ ತುಂಬೆಲ್ಲ ಹರಡಿರುವ ಹಲಸಿನ ಕಾಯಿಯ ಸೊಬಗನ್ನು ಕಾಣುವುದೆಂದರೆ ಮನಸ್ಸಿಗೆ ಅತೀವ ಆನಂದ ಅಲ್ವೇ? ದುಂಡು ದುಂಡಗೆ ಬೆಳೆದು ನಿಂತು ದಾರಿಹೋಕರನ್ನು ಒಮ್ಮೆಯಾದರೂ ತನ್ನತ್ತ ನೋಡುವಂತೆ ಮಾಡುವ ಈ ಮರ ಇನ್ನಾ ನೇಜಾರು ಹೊಸಮನೆ ಪ್ರಕಾಶ್ ಮೂಲ್ಯರ ಮನೆ ಆವರಣದಲ್ಲಿದೆ.
ಪಡುಬಿದ್ರಿ - ಕಾರ್ಕಳ ರಸ್ತೆಯ ಕಾಂಜರಟಕ್ಟೆಯಿಂದ ಇನ್ನಾಕ್ಕೆ ತೆರಳುವ ರಸ್ತೆ ಬದಿಯ ಈ ಮರದಲ್ಲಿ ನೂರಾರು ಹಣ್ಣು ಬೆಳೆದಿದ್ದು, ಹಲಸು ಪ್ರಿಯರಂತೂ ಸೆಲ್ಫಿ ತೆಗೆಯದೇ ಮುಂದೆ ಹೋಗಲಾರರು.
ಇನ್ನು, ಪ್ರಕಾಶ್ ಮೂಲ್ಯ ಹೇಳುವಂತೆ ಈ ಮರದ ಹಲಸು ಬಲು ಸ್ವಾದಿಷ್ಟ. ಇನ್ನಾ ಮುದ್ದಾಣು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೆ ವೇಳೆ ಧ್ವಜ ಸ್ತಂಭಕ್ಕೆ ಕಟ್ಟಲು ಹಲಸಿನ ಕಾಯಿ ಗೊಂಚಲನ್ನು ಇಲ್ಲಿಂದಲೇ ಒದಗಿಸಲಾಗುತ್ತದೆ.
ಇನ್ನಾ ಎಂ.ವಿ. ಶಾಸ್ತ್ರಿ ಶಾಲೆ ಮಕ್ಕಳ ಬಿಸಿಯೂಟಕ್ಕಾಗಿಯೂ ಹಲಸಿನ ಕಾಯಿ ನೀಡಲಾಗುತ್ತದೆ. ಪಾದಚಾರಿಗಳಿಗೆ, ವಾಹನ ಸಂಚಾರಿಗಳಿಗೆ ಉಚಿತವಾಗಿ ಹಲಸು ನೀಡುತ್ತೇವೆ ಎಂದರು.
Kshetra Samachara
01/06/2022 11:55 am