ಮಲ್ಪೆ: ಪ್ರವಾಸಿಗರ ಮೆಚ್ಚಿನ ತಾಣ ಉಡುಪಿಯ ಮಲ್ಪೆ ಬೀಚ್ ಪ್ರವಾಸಿಗರಿಗೆ ಮುಕ್ತವಾಗಿ ತೆರೆದುಕೊಂಡಿದೆ.. ಸಮುದ್ರಕ್ಕೆ ಇಳಿಯದಂತೆ ಅಳವಡಿಸಲಾಗಿದ್ದ, ತಡೆ ಬೇಲಿಯನ್ನು ತೆರವುಗೊಳಿಸಲಾಗಿದ್ದು, ಸಮುದ್ರದಲ್ಲಿ ಈಜಾಡಲು ಅವಕಾಶ ನೀಡಲಾಗಿದೆ. ಪ್ರವಾಸಿಗರಿಗಾಗಿ ವಾಟರ್ ಸ್ಪೋರ್ಟ್ ಆರಂಭಗೊಂಡಿದ್ದು,ಸಾವಿರಾರು ಪ್ರವಾಸಿಗರು ಆಗಮಿಸಿ ಮಲ್ಪೆ ಬೀಚ್‌ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ.
ಸಂಜೆಯ ಸೂರ್ಯಾಸ್ತಮಾನ ನೋಡುವುದಕ್ಕೆ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಿದ್ದು, ವೀಕೆಂಡ್‌ಗಳಿಗೆ ಹೆಚ್ಚಿನ ಪ್ರವಾಸಿಗರು ಆಗಮಿಸುವ ಸಾಧ್ಯತೆ ಇದೆ. ಮಲ್ಪೆ ಬೀಚ್ ತೆರೆದುಕೊಂಡ ಹಿನ್ನೆಲೆಯಲ್ಲಿ ಮಲ್ಪೆಯ ಅಂಗಡಿ, ಹೋಟೆಲ್‌ಗಳಿಗೂ ವ್ಯಾಪಾರದಲ್ಲಿ ಚೇತರಿಕೆ ಕಂಡು ಬಂದಿದೆ.
Kshetra Samachara
22/09/2021 12:58 pm