ಉಡುಪಿ: ಕರಾವಳಿ ಭಾಗದಲ್ಲಿ ಸಾಂಪ್ರದಾಯಿಕ ಮೀನುಗಾರಿಕೆ ನಡೆಸುವ ಮೀನುಗಾರರ ಒಂದು ಗುಂಪಿಗೆ ಜಾಕ್ ಪಾಟ್ ಹೊಡೆದಿದೆ. ಮಲ್ಪೆ ಸಮೀಪದ ತೊಟ್ಟಂ ಪರಿಸರದಲ್ಲಿ ಕೈರಂಪಣಿ ಬಲೆಗಳ ಮೂಲಕ ಮೀನು ಹಿಡಿಯುತ್ತಿದ್ದ ತಂಡಕ್ಕೆ ಇವತ್ತು ರಾಶಿ ರಾಶಿ ಮೀನು ದೊರಕಿದೆ. ಅದೂ ಅಂತಿಂಥಾ ಮೀನಲ್ಲ, ದುಬಾರಿ ಬೆಲೆಯ ಪಾಂಪ್ಲೆಟ್ ಮೀನಿನ ರಾಶಿಗೆ ಇವರ ಬಲೆ ಬಿದ್ದಿದೆ. ಬೆಳ್ಳಂಬೆಳಿಗ್ಗೆ ಮೀನಿನ ರಾಶಿ ಹಿಡಿದು ಮೀನುಗಾರರು ಫುಲ್ ಖುಷ್ ಆಗಿದ್ದಾರೆ. ದಿನವೂ ಶ್ರಮ ವಹಿಸಿ ಮೂರು ಕಾಸು ಸಂಪಾದಿಸಿ ಮನೆಗೆ ಹೋಗುವ ಬಡ ಸಾಂಪ್ರದಾಯಿಕ ಮೀನುಗಾರರು ಈ ಮೂಲಕ ಒಂದು ದಿನವಾದರೂ ಒಂದಿಷ್ಟು ಲಾಭ ಮಾಡಿಕೊಳ್ಳುವಂತಾಗಿದೆ.
Kshetra Samachara
03/09/2021 03:31 pm