ಕೋಟ: ಮಧುವನ ಇ ಸಿ ಆರ್ ಇನ್ಸ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಸ್ಟಡೀಸ್ ನ ಎನ್ ಎಸ್ ಎಸ್, ನೇಚರ್ ಕ್ಲಬ್ ಹಾಗೂ ರೆಡ್ ಕ್ರಾಸ್ ಘಟಕಗಳು ಜಂಟಿಯಾಗಿ ಕೋಟ ಪಡುಕೆರೆ ಕಡಲ ತಡಿಯುದ್ದಕ್ಕೂ ಪ್ಲಾಸ್ಟಿಕ್ ಮುಕ್ತ ಕಡಲ ತಡಿ ಎಂಬ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.
ಸಂಘ ಸಂಸ್ಥೆಗಳು ಮತ್ತು ವಿದ್ಯಾರ್ಥಿಗಳು ಪ್ಲಾಸ್ಟಿಕ್ ಮುಕ್ತ ಕಡಲತಡಿಯನಾಗಿಸಲು ಶ್ರಮಿಸಿದರು,ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶ್ರೀ ಪ್ರಶಾಂತ್ ಉದ್ಯಮಿ ಜನತಾ ಫಿಶ್ ಮೀಲ್ಸ್ ಮತ್ತು ಆಯಿಲ್ ಪ್ರಾಡಕ್ಟ್ಸ್, ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣ ಮಾಡುವಲ್ಲಿ ವಿದ್ಯಾರ್ಥಿಗಳ ಪಾತ್ರದ ಕುರಿತು ವಿವರಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಆಕಾಶ್ ಸವಳಸಂಗ್, ಏವಿಯೇಷನ್ ವಿಭಾಗದ ಮುಖ್ಯಸ್ಥರಾದ ಶ್ರೀ ಮಿರ್ ತಾಜದಾರ್ ಹುಸೇನ್ ಹಾಗೂ ಉಪಾಪ್ರಾಂಶುಪಾಲಾರಾದ ಶ್ರೀಮತಿ ಚಂದ್ರಕಲಾ ಎಸ್ ಇವರು ವಿದ್ಯಾರ್ಥಿಗಳಿಗೆ ಅಭಿನಂದಿಸಿ, ಹುರಿದುಂಬಿಸಿದರು. ನರ್ಸಿಂಗ್ ಕಾಲೇಜು ಪ್ರಾಂಶುಪಾಲರಾದ ಶ್ರೀಮತಿ ಲಿಸಾ ಲಿಯೋ, ಎನ್ ಎಸ್ ಎಸ್ ಯೋಜನಾಧಿಕಾರಿ ಶ್ರೀ ಅಶೋಕ್ ಜೋಗಿ, ಎನ್ ಎಸ್ ಎಸ್ ಸಹಯೋಜನಾಧಿಕಾರಿ ಕುಮಾರಿ ನಿಧಿ, ರೆಡ್ ಕ್ರಾಸ್ ಘಟಕದ ಅಧಿಕಾರಿ ಕುಮಾರಿ ಶ್ರೀನಿಧಿ ಹೆಗ್ಡೆ, ನೇಚರ್ ಕ್ಲಬ್ ಸಂಯೋಜಕಿ ಕುಮಾರಿ ಸುಷ್ಮಾ, ಉಪನ್ಯಾಸಕಿಯರಾದ ಡಾ. ಶಾಹಿದ ಜಹಾನ್ ಮತ್ತು ಕುಮಾರಿ ಸಮಿತ ಭಾಗವಹಿಸಿದ್ದರು. ಶ್ರೀ ಅಶೋಕ್ ಜೋಗಿ ನಿರೂಪಿಸಿದರು.
Kshetra Samachara
18/02/2021 12:10 pm