ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಗಿಡಗಳೊಂದಿಗೆ ಪ್ರತಿನಿತ್ಯವೂ ಮಾತನಾಡಿ; ಮಕ್ಕಳಿಗೆ ಕಿವಿಮಾತು ಹೇಳಿದ ಪರಿಸರಪ್ರೇಮಿ

ಮಂಗಳೂರು: ಗಿಡಗಳನ್ನು ಬರೂ ನೆಡುವುದಷ್ಟೇ ಸಾಲದು, ಅವುಗಳೊಂದಿಗೆ ಪ್ರತಿದಿನವೂ ಸಂವಾದ ಮಾಡಬೇಕು. ಗಿಡ-ಮರಗಳೊಂದಿಗೆ ದೈನಂದಿನ ಮಾತುಕತೆ ನಡೆಸಿದ್ದಲ್ಲಿ ನಮಗೆ ಅವುಗಳ ಮೇಲೆ ಪ್ರೀತಿ ಬೆಳೆಯುತ್ತದೆ ಎಂದು ಪರಿಸರ ಪ್ರೇಮಿ ಮಾಧವ ಉಳ್ಳಾಲ್ ಅವರು ಮಕ್ಕಳಿಗೆ ಕಿವಿಮಾತು ಹೇಳಿದರು.

ರಿಷಿ ಸಾಮಾಜಿಕ ಸಾಂಸ್ಕೃತಿಕ ಪ್ರತಿಷ್ಠಾನ ಬೆಳ್ತಂಗಡಿ ಇದರ ಆಶ್ರಯದಲ್ಲಿ ಅರಣ್ಯ ಇಲಾಖೆ ಮಂಗಳೂರು ವಿಭಾಗ ಮತ್ತು ಕಾವೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇಕೋ ಕ್ಲಬ್‌ ಸಹಯೋಗದಲ್ಲಿ ‘ಹಚ್ಚ ಹಸಿರು ಸ್ವಚ್ಛ ಉಸಿರು’ ಪರಿಕಲ್ಪನೆಯೊಂದಿಗೆ ‘ರಿಷಿ ಹಸಿರು ಹಬ್ಬ-2022’ ಕಾರ್ಯಕ್ರಮ ನಗರದ ಕಾವೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಇಂದು ನಡೆಯಿತು. ರಿಷಿ ಸಾಮಾಜಿಕ ಸಾಂಸ್ಕೃತಿಕ ಪ್ರತಿಷ್ಠಾನದ ಸದಸ್ಯೆ ರೂಪಾ ಜೆ ಪಡ್ಪು ಗಿಡ ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಶಿವರಾಮ ಪಿ ವಹಿಸಿ ಮಾತನಾಡಿ, ಕೋವಿಡ್ -19 ಲಾಕ್‌ಡೌನ್ ದಿನಗಳಲ್ಲಿ ಪ್ರಕೃತಿ ನಮಗೆ ಸಾಕಷ್ಟು ಪಾಠ ಕಲಿಸಿದೆ. ಪ್ರಕೃತಿಯಲ್ಲೂ ಪರಿವರ್ತನೆ ಆಗಿತ್ತು. ವಾಣಿಜ್ಯ ಬೆಳೆಗಳನ್ನು ಬೆಳೆಯುವ ಭರದಲ್ಲಿ ಕಾಡು ಕಡಿದು, ಗುಡ್ಡ ಅಗೆದು ಪ್ರಕೃತಿಯನ್ನು ಶೋಷಣೆ ಮಾಡುತ್ತಿರುವ ಪರಿಣಾಮ ಇಂದು ಪ್ರಾಕೃತಿಕ ವಿಕೋಪಗಳಾಗುತ್ತಿವೆ ಎಂದು ಹೇಳಿದರು. ಈ ಸಂದರ್ಭ ರಾಜ್ಯ ಸರ್ಕಾರದ ಅರಣ್ಯ ಮಿತ್ರ ಪ್ರಶಸ್ತಿ ವಿಜೇತ ಮಾಧವ ಉಳ್ಳಾಲ್ ಇವರನ್ನು ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಲಾಯಿತು. ಈ ವೇಳೆ ಪ್ರತಿಷ್ಠಾನದ ಸದಸ್ಯರಿಂದ ಬೆಳ್ತಂಗಡಿ ಮತ್ತು ಬಂಟ್ವಾಳ ತಾಲೂಕಿನ ವಿವಿಧಡೆಗಳಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

Edited By : Nagaraj Tulugeri
Kshetra Samachara

Kshetra Samachara

19/07/2022 10:53 pm

Cinque Terre

16.1 K

Cinque Terre

2

ಸಂಬಂಧಿತ ಸುದ್ದಿ