ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಂಜಾರುಮಲೆ ಮತಗಟ್ಟೆ ಪರಿಶೀಲನೆಗೆ ಹೋದಾಗ ಎದುರು ಬಂದ ಆನೆ

ಬೆಳ್ತಂಗಡಿ: ಆ ಅಧಿಕಾರಿಗಳು ಚುನಾವಣಾ ಮತಕೇಂದ್ರ ಪರಿಶೀಲನೆಗೆ ಹೋಗಿದ್ರು. ಆದ್ರೆ ಅವರಿಗೆ ಭೇಟಿಯಾಗಿದ್ದು ಮಾತ್ರ ಒಂಟಿ ಸಲಗ. ಇಂತದ್ದೊಂದು ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಬಾಂಜಾರುಮಲೆಯಲ್ಲಿ ನಡೆದಿದೆ.

ಬಾಂಜಾರುಮಲೆ ಪ್ರದೇಶ ಬೆಳ್ತಂಗಡಿ ತಾಲೂಕು ಕೇಂದ್ರದಿಂದ 35 ಕಿಮೀ ದೂರದಲ್ಲಿರುವ ನೆರಿಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಚಾರ್ಮಾಡಿ ಘಾಟಿಯ 9ನೇ ತಿರುವಿನಿಂದ ಸುಮಾರು 10 ಕಿ.ಮೀ. ಒಳ ಭಾಗದಲ್ಲಿದೆ. ಕಾಡಿನಿಂದ ಆವೃತ್ತವಾಗಿರುವ ಈ ಪ್ರದೇಶದಲ್ಲಿ ಸುಮಾರು 45 ಮನೆಗಳ 260ರಷ್ಟು ಮತದಾರರಿಗೆ ಬಾಂಜಾರುಮಲೆ ಸಮುದಾಯ ಭವನದಲ್ಲಿ ಮತಗಟ್ಟೆ ಇದೆ.

ಇಲ್ಲಿಗೆ ಚುನಾವಣಾಧಿಕಾರಿ ರಘು, ಸಹಾಯಕ ಚುನಾವಣಾಧಿಕಾರಿ ಅಜಿತ್, ನೆರಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಗಾಯತ್ರಿ ಪಿ. ಹಾಗೂ ಸಿಬ್ಬಂದಿ ಮತಗಟ್ಟೆ ಪರಿಶೀಲನೆಗೆ ತೆರಳಿದ ಸಂದರ್ಭ ಒಂಟಿ ಸಲಗ ಎದುರಾಗಿದೆ. ವಾಹನದ ಮೂಲಕ ಹೋಗುತ್ತಿದ್ದಾಗ ರಸ್ತೆಯಲ್ಲಿ ಒಂಟಿ ಸಲಗ ಕಂಡುಬಂದಿದ್ದು, ಸಮೀಪವಿದ್ದ ಇನ್ನೊಂದು ಕವಲು ರಸ್ತೆಯಲ್ಲಿ ವಾಹನವನ್ನು ಕೊಂಡೊಯ್ದ ಕಾರಣ ಯಾವುದೇ ಅಪಾಯ ಸಂಭವಿಸಲಿಲ್ಲ.

Edited By : Nagaraj Tulugeri
Kshetra Samachara

Kshetra Samachara

12/12/2020 12:18 pm

Cinque Terre

23.27 K

Cinque Terre

2

ಸಂಬಂಧಿತ ಸುದ್ದಿ