ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಡಬ: ಕಾಡಾನೆ ಉಪಟಳ: ಕಡಬ ಜನರಿಗೆ ತಳಮಳ

ಕಡಬ: ನೂಜಿಬಾಳ್ತಿಲ ಗ್ರಾಮದ ಬಳಕ್ಕ, ಬೊಳ್ಳಾಜೆ ಪ್ರದೇಶದಲ್ಲಿ ಹಿಂಡು ಕಾಡಾನೆಗಳ ಉಪಟಳಕ್ಕೆ ಕಳೆದ ಒಂದು ವಾರದಿಂದ ಸ್ಥಳೀಯ ಜನತೆ ತತ್ತರಿಸಿ ಹೋಗಿದ್ದಾರೆ.

ಈ ಹಿಂದೆ ರಾತ್ರಿ ವೇಳೆಯಲ್ಲಿ ಕಾಡಿನಿಂದ ಊರಿಗೆ ಇಳಿಯುತ್ತಿದ್ದ ಕಾಡಾನೆಗಳು ಇದೀಗ ಹಗಲು ರಾತ್ರಿ ಎನ್ನದೆ ದಿನದ 24 ಗಂಟೆಯೂ ಕಾಣಸಿಗುತ್ತದೆ, ಇದರಿಂದ ಇಲ್ಲಿನ ಸುಮಾರು 25ಕ್ಕೂ ಹೆಚ್ಚು ಕುಟುಂಬಗಳು ಮನೆಯಿಂದ ಹೊರ ಬರಲು ಆತಂಕಗೊಂಡಿದ್ದಾರೆ.

ಕೆಲ ದಿನಗಳ ಹಿಂದೆ ಕಾಡಾನೆಯೊಂದು ಪ್ರೇಮ ಎಂಬವರು ಹಾಗೂ ಅವರ ಮಗಳನ್ನು ಅಟ್ಟಿಸಿಕೊಂಡು ಬಂದಿದ್ದು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ದಿನನಿತ್ಯ ಮನೆಯಿಂದ ಪೇಟೆ ಕಡೆಗೆ ಬರಬೇಕಾದವರು ಆನೆಗಳ ಭಯದಿಂದ ಮನೆಯಿಂದ ಹೊರಬಾರದ ಸ್ಥಿತಿಯಲ್ಲಿದ್ದಾರೆ. ಕಾಡಂಚಿನಲ್ಲಿರುವ ಒಂದೆ ರಸ್ತೆಯಲ್ಲಿ ಜನರು ಸಂಚರಿಸಬೇಕಾಗಿದ್ದು ಎಲ್ಲಿ ಆನೆ ಸಿಗುತ್ತದೋ ಎಂಬ ಭಯದಿಂದ ಇರುವಂತಾಗಿಗೆ. ಇಲ್ಲಿನ ಜನರ ಕೃಷಿ ಅಂತೂ ಆನೆ ದಾಳಿಗೆ ತುತ್ತಾಗಿ ವಿಪರಿತ ನಷ್ಟವಾಗಿದೆ, ಇದೀಗ ಕೃಷಿ ನಷ್ಟದಿಂದ ಜೀವ ಭಯವೇ ಹೆಚ್ಚಾಗಿದೆ. ಅನಾರೋಗ್ಯಕ್ಕೆ ಒಳಗಾದರೆ ಇಲ್ಲಿಯ ಜನತೆಯ ಪರಿಸ್ಥಿತಿ ಹೇಳತೀರದು, ಇದೀಗ ಅಲ್ಲಿಯ ನಿವಾಸಿಗಳ ಪರಿಸ್ಥಿತಿ ಎಲ್ಲಿಯ ತನಕ ತಲುಪಿದೆ ಎಂದರೆ ದಿನನಿತ್ಯದ ಆಹಾರ ಸಾಮಾಗ್ರಿಗಳಿಗೆ ಪೇಟೆಗೆ ಬರಲು ಸಾಧ್ಯವಾಗದ ಸ್ಥಿತಿ ಅವರದ್ದಾಗಿದೆ. ಒಂದು ವಾರದಿಂದ ಆನೆಯ ಹಿಂಡು ಹಗಲು ವೇಳೆಯಲ್ಲಿಯೇ ಮನೆಯ ಸಮೀಪವೂ ಕಂಡುಬರುತ್ತಿತ್ತಂತೆ, ನಾಯಿ ಜಾನುವಾರುಗಳು ಆನೆಗಳಿಗೆ ಹೆದರಿರುವ ಬಗ್ಗೆಯೂ ಅಲ್ಲಿಯ ನಿವಾಸಿಗಳು ಮಾಹಿತಿ ನೀಡಿದ್ದಾರೆ.

ಆನೆಗಳ ಉಪಟಳ ಕಳೆದ ಕೆಲವು ದಿನಗಳಿಂದ ಹೆಚ್ಚಾಗುತ್ತಿದ್ದರೂ ಈ ಬಗ್ಗೆ ಅರಣ್ಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎನ್ನುತ್ತಾರೆ ಇಲ್ಲಿನ ನಿವಾಸಿಗಳು, ಆನೆ ಉಪಟಲದ ಬಗ್ಗೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳಲು ಮುಂದಾಗಿಲ್ಲ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕಾಗಿ ಸಾರ್ವಜನಿಕರ ಆಗ್ರಹಿಸಿದರು.

Edited By : Nagesh Gaonkar
Kshetra Samachara

Kshetra Samachara

05/12/2020 08:52 pm

Cinque Terre

33.4 K

Cinque Terre

2