ಪಬ್ಲಿಕ್ ನೆಕ್ಸ್ಟ್ ವಿಶೇಷ: : ಶಫೀ ಉಚ್ಚಿಲ
ಉಡುಪಿ: ತ್ಯಾಜ್ಯ ಎಸೆಯುವ ಸ್ಥಳವಾಗಿ ಮಾರ್ಪಟ್ಟಿರುವ ಜಾಗದಲ್ಲಿ,ಪರಿಸರ ಪ್ರೇಮಿಯೊಬ್ಬರು ದಿನನಿತ್ಯ ಗಿಡಗಳಿಗೆ ನೀರುಣಿಸಿ, ಸ್ಥಳದಲ್ಲಿ ಸ್ವಚ್ಚತೆಯನ್ನು ಕಾಪಾಡುವ ಮೂಲಕ ನೋಡುಗರ ಕಣ್ಣಿಗೆ ಉದ್ಯಾನವನದ ಅಂದವನ್ನು ನೀಡಿರುವುದು ನಿಜಕ್ಕೂ ಶ್ಲಾಘನೀಯ.
ಆಧುನೀಕರಣದ ಹೆಸರಿನಲ್ಲಿ ಗಿಡಮರಗಳನ್ನು ಕಡಿಯುತ್ತಿರುವ ಈ ಕಾಲದಲ್ಲಿ,ಉಡುಪಿ ಸಮೀಪದ ಕಟಪಾಡಿ- ಶಿರ್ವ ರಸ್ತೆಯ ನಿವಾಸಿ ಮ್ಯಾಕ್ಸಿಂ ಆಳ್ವಾ ಎಂಬವರು.ರಸ್ತೆಯ ಅಕ್ಕಪಕ್ಕದಲ್ಲಿ ಅರಣ್ಯ ಇಲಾಖೆಯವರು ನೆಟ್ಟಿರುವ ಗಿಡಗಳಿಗೆ ದಿನನಿತ್ಯ ನೀರೆರೆದು ಅದರ ಪೋಷಣೆ ಮಾಡುತ್ತಿದ್ದಾರೆ.
ಅರಣ್ಯ ಇಲಾಖೆ ಹಾಗು ಇನ್ನಿತರ ಸಂಘ ಸಂಸ್ಥೆಗಳು ರಸ್ತೆಯ ಅಕ್ಕಪಕ್ಕದಲ್ಲಿ ಗಿಡಗಳನ್ನು ನೆಡುವುದು ನಾವು ಕಾಣುತ್ತೇವೆ. ದಿನ ಕಳೆದಂತೆ ನಿರ್ವಾಹಣೆ ಕೊರತೆಯಿಂದಾಗಿ ಗಿಡಗಳು ಒಣಗಿ ಹೋಗುತ್ತಿದ್ದ, ಪೊದೆಗಳು ಬೆಳೆದು ನಿಂತು, ಮಾಡಿದ ಕೆಲಸ ವ್ಯರ್ಥವಾಗುತ್ತವೆ.ಆದ್ರೆ ಪರಿಸರ ಪ್ರೇಮಿ ಮ್ಯಾಕ್ಸಿಂ ಆಳ್ವರವರು ಗಿಡಗಳ ಸುತ್ತ ತುಂಬಿದ ಗಿಡಗಂಟಿಗಳನ್ನು ತೆಗೆದು ಸ್ವಚ್ಚಗೊಳಿಸುತ್ತಾರೆ.ಗಿಡಗಳಿಗೆ ಮಣ್ಣಿನ ಕಟ್ಟೆ ಕಟ್ಟಿ ನಿತ್ಯವೂ ಪೈಪ್ ಮೂಲಕ ನೀರುಣಿಸಿ ತೃಪ್ತಿ ಪಟ್ಟುಕೊಳ್ಳುತ್ತಾರೆ. ಪಕ್ಷಿಗಳಿಗೆ, ದುಂಬಿಗಳಿಗೆ ಉಪಯುಕ್ತ ಆಗುವಂತೆ ಹಣ್ಣಿನ ಗಿಡಗಳನ್ನು ನೆಟ್ಟು ರಸ್ತೆ ಬದಿ ಕಣ್ಮನ ಸೆಳೆಯುವ ಸುಂದರ ಪರಿಸರ ನಿರ್ಮಾಣ ಮಾಡುವ ಮೂಲಕ ಮಾದರಿಯಾಗಿದ್ದಾರೆ.ಸದ್ಯ ಕೆಲವು ಹಣ್ಣಿನ ಗಿಡಗಳಲ್ಲಿ ಹೂ ಬಿಟ್ಟಿದು ಇದು ನನಗೆ ತುಂಬಾ ಸಂತೋಷಕೊಟ್ಟಿದೆ ಎನ್ನುತ್ತಾರೆ ಮ್ಯಾಕ್ಸಿಂ ಆಳ್ವಾ.
Kshetra Samachara
04/12/2020 01:53 pm