ಹೆಬ್ರಿ: ಉಡುಪಿ ಜಿಲ್ಲೆಯ ಹೆಬ್ರಿಯಲ್ಲಿ ಇಂದು ಭಾರೀ ಗಾತ್ರದ ಕಾಳಿಂಗ ಸರ್ಪ ಪ್ರತ್ಯಕ್ಷಗೊಂಡು ಸ್ಥಳೀಯರಲ್ಲಿ ಆತಂಕ ಮೂಡಿಸಿದ ಘಟನೆ ನಡೆಯಿತು. ಜನವಸತಿ ಪ್ರದೇಶವಾದ ಹೆಬ್ರಿ ಬಂಟರ ಭವನದ ಬಳಿಯ ಮನೆಯೊಂದರ ತೋಟದಲ್ಲಿ ಈ ಹಾವು ಕಂಡು ಬಂತು. ಬೃಹತ್ ಆಕಾರದ ಕಾಳಿಂಗ ಸರ್ಪವನ್ನು ಅಲ್ಬಾಡಿಯ ಉರಗ ಪ್ರೇಮಿ ನಾಗರಾಜ್ ಹಿಡಿದು ಸೋಮೇಶ್ವರ ಅಭಯಾರಣ್ಯಕ್ಕೆ ಸುರಕ್ಷಿತವಾಗಿ ಬಿಟ್ಟರು.
Kshetra Samachara
17/10/2020 12:47 pm