ಕಾಪು: ಕಾಪು ಲೈಟ್ ಹೌಸ್ ಬಳಿಯ ನದಿ ಪಾತ್ರದಿಂದ ನೆರೆ ನೀರು ಸಮುದ್ರ ಸೇರುತ್ತಿದ್ದು, ಪ್ರಸಿದ್ಧ ಲೈಟ್ ಹೌಸ್‌ನ್ನು ಸಂಪರ್ಕಿಸುವ ಕಾಲುದಾರಿ ಸಂಪೂರ್ಣ ಕೊಚ್ಚಿ ಹೋಗಿದೆ.
ಲೈಟ್ ಹೌಸ್‌ನ ಹಿಂಭಾಗದಲ್ಲಿ ಸಮುದ್ರ ಮತ್ತು ನದಿ ನೀರಿನ ಸಂಗಮ ಪ್ರದೇಶವಿದೆ.
ಭಾರೀ ಮಳೆಯಿಂದಾಗಿ ಹರಿದು ಬಂದ ನೀರು ಲೈಟ್ ಹೌಸ್‌ನ ಮುಂಭಾಗದಿಂದಲೇ ಸಮುದ್ರ ಸೇರುತ್ತಿದೆ. ಹೀಗಾಗಿ ಲೈಟ್ ಹೌಸ್ ಗೆ ತೆರಳುವ ಸಂಪರ್ಕ ಕೊಂಡಿ, ಶೌಚಾಲಯ ಬಳಿಯ ಸಿಮೆಂಟ್ ಸ್ಲ್ಯಾಬ್, ಪಾತ್ ವೇ, ಲೈಟ್ ಹೌಸ್ ಪ್ರವೇಶದ ಮೆಟ್ಟಿಲುಗಳು ಸಂಪೂರ್ಣ ಕೊಚ್ಚಿ ಹೋಗಿವೆ.
ಕಾಪು ಪಡು ಗ್ರಾಮ, ಗರಡಿ ಪ್ರದೇಶ, ಸುಬ್ಬಯ್ಯ ತೋಟ, ಬೈರು ಗುತ್ತು ತೋಟ ಸೇರಿದಂತೆ ಎಲ್ಲೆಡೆ ಸಂಗ್ರಹವಾಗಿ, ನದಿಯ ಮೂಲಕ ರಭಸವಾಗಿ ಹರಿದು ಬರುತ್ತಿರುವ ಮಳೆನೀರು ಲೈಟ್ ಹೌಸ್‌ನ ಮುಂಭಾಗದಿಂದಲೇ ಸಮುದ್ರ ಸೇರುತ್ತಿರುವುದರಿಂದ ಕಾಪು ಲೈಟ್ ಹೌಸ್‌ಗೆ ಹೋಗುವ ಸಂಪರ್ಕ ರಸ್ತೆ ಬಂದ್ ಆಗಿದೆ.
Kshetra Samachara
21/09/2020 01:44 pm