ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೆಜಮಾಡಿ: ನೆರೆ ಹಾವಳಿಯಿಂದ ಆತಂಕಿತ ಕುಟುಂಬಗಳಿಗೆ ಪಿಎಫ್ಐ ಕಾರ್ಯಕರ್ತರಿಂದ ನೆರವು

ಹೆಜಮಾಡಿ: ನೆರೆನೀರಿನಿಂದ ಜಲಾವೃತಗೊಂಡಿದ್ದ ಮನೆ ಮಂದಿಯನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ ಐ) ಹೆಜಮಾಡಿ ಕಾರ್ಯಕರ್ತರು ಸುರಕ್ಷಿತ ಸ್ಥಳಗಳಿಗೆ ತಲುಪಿಸುವಲ್ಲಿ ಸಹಕರಿಸಿದ್ದಾರೆ.

ಕಳೆದ ಎರಡು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ಉಡುಪಿ ಜಿಲ್ಲೆಯ ಬಹುತೇಕ ಹೊಳೆ, ತೋಡು ಉಕ್ಕಿ ಹರಿಯುತ್ತಿದ್ದು, ತಗ್ಗು ಪ್ರದೇಶಗಳಲ್ಲಿ ನೀರು ತುಂಬಿಕೊಂಡಿದೆ. ಹೆಜಮಾಡಿ ಸಮೀಪದ ಅವರಾಲು ಮಟ್ಟು ಸೇರಿದಂತೆ ಅನೇಕ ಕಡೆ ಹಲವು ಮನೆಗಳು ಜಲಾವೃತಗೊಂಡಿದೆ.

ಈ ಸಂದರ್ಭ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಹೆಜಮಾಡಿ ತಂಡ ಹಲವು ಕುಟುಂಬಗಳನ್ನು ಸುರಕ್ಷಿತ ಕೇಂದ್ರಕ್ಕೆ ಸ್ಥಳಾಂ--ತರಿಸಿದ್ದು, ಜಾನುವಾರುಗಳನ್ನು ರಕ್ಷಿಸಲಾಯಿತು.

Edited By :
Kshetra Samachara

Kshetra Samachara

20/09/2020 10:46 pm

Cinque Terre

17.33 K

Cinque Terre

0

ಸಂಬಂಧಿತ ಸುದ್ದಿ