ಹಿರಿಯಡ್ಕ: ಇಲ್ಲಿಗೆ ಸಮೀಪದ ಹಿರಿಯಡ್ಕದ ಪಾಳುಬಿದ್ದ ಮನೆಯೊಂದರಲ್ಲಿ ಚಿರತೆಯೊಂದು ಸೇರಿಕೊಂಡಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸಿ ಚಿರತೆ ಸೆರೆ ಹಿಡಿಯಲು ಸಿದ್ಧತೆ ನಡೆಸಿದ್ದಾರೆ.
ಕಾರ್ಕಳದಿಂದ ಗನ್ ತರಿಸಲಾಗುತ್ತಿದ್ದು ,ಮಂಗಳೂರಿನಿಂದ ಅರಿವಳಿಕೆ ಮದ್ದು ಮತ್ತು ವೈದ್ಯರು ಬರಲಿದ್ದಾರೆ. ಚಿರತೆ ಇಲ್ಲಿ ಅವಿತುಕೊಂಡಿರುವುದನ್ನು ಅರಣ್ಯಾಧಿಕಾರಿಗಳು ಖಚಿತಪಡಿಸಿಕೊಂಡಿದ್ದಾರೆ. ಒಳಗೆ ಸೇರಿಕೊಂಡಿರುವ ಚಿರತೆಗೆ ಹೊರ ಬರಲು ದಾರಿ ಕಾಣಿಸುತ್ತಿಲ್ಲ ಎನ್ನಲಾಗಿದೆ. ಮಣಿಪಾಲ, ಸರಳಬೆಟ್ಟು ಪರಿಸರದಲ್ಲಿ ಹಲವು ದಿನಗಳಿಂದ ಚಿರತೆ ಕಾಟ ಹೆಚ್ಚುತ್ತಿದ್ದು ಜನರು ಕತ್ತಲಾದ ನಂತರ ಭಯದಿಂದಲೇ ಓಡಾಡಬೇಕಾಗಿತ್ತು.
Kshetra Samachara
07/09/2022 01:55 pm