ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ದ.ಕ.-ಕೊಡಗು ಗಡಿ ಭಾಗದಲ್ಲಿ ಲಘು ಭೂಕಂಪನ; ಡಿಸಿ ಹೇಳಿದ್ದೇನು?

ಮಂಗಳೂರು: ದ.ಕ.ಜಿಲ್ಲೆಯ ಸುಳ್ಯದ ಕೆಲ ಪ್ರದೇಶಗಳು - ಕೊಡಗು ಗಡಿ ಭಾಗಗಳಲ್ಲಿ ಇಂದು ಬೆಳಗ್ಗೆ 9.10 ನಿಮಿಷ ಸುಮಾರಿಗೆ ಲಘು ಭೂಕಂಪನದ ಅನುಭವವಾಗಿದೆ. ಸುಳ್ಯ ತಾಲೂಕಿನ ವಿವಿಧ ಕಡೆ ಭೂಮಿ ಕಂಪನದ ಅನುಭವವಾಗಿದೆ‌. ಸುಳ್ಯ ಪಟ್ಟಣ, ಸಂಪಾಜೆ, ಗೂನಡ್ಕ, ಮರ್ಕಂಜ, ಆಲೆಟ್ಟಿ, ತೊಡಿಕಾನ, ಪೆರಾಜೆಗಳಲ್ಲಿ ಭೂ ಕಂಪನದ ಅನುಭವವಾಗಿದೆ. 3-4 ಸೆಕೆಂಡ್ ಗಳ ಕಾಲ ಶಬ್ದದೊಂದಿಗೆ ಭೂಮಿ ಲಘು ಕಂಪನಗೊಂಡಿತ್ತು.

ಈ ಬಗ್ಗೆ ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಪ್ರತಿಕ್ರಿಯೆ ನೀಡಿ, ಇಂದು ಸಂಭವಿಸಿರುವ ಭೂಕಂಪನದಲ್ಲಿ ಯಾವುದೇ ಜೀವ ಹಾನಿಯಾಗಿಲ್ಲ. ಜನತೆ ಭಯಪಡುವ ಅವಶ್ಯಕತೆ ಇಲ್ಲ. ಈ ಬಗ್ಗೆ ನಮಗೆ ಬಹಳಷ್ಟು ಕರೆ ಬಂದಿದೆ. ರಾಜ್ಯ ನೈಸರ್ಗಿಕ ವಿಕೋಪ ಮ್ಯಾನೇಜ್ಮೆಂಟ್ ಸೆಲ್ ನಿಂದಲೂ ಭೂಕಂಪನ ಆಗಿರುವ ಬಗ್ಗೆ ದೃಢಗೊಂಡಿದೆ. ಗಡಿಭಾಗದ ಸುಮಾರು 10 ಕಿ.ಮೀ. ವ್ಯಾಪ್ತಿಯಲ್ಲಿ 2.7 ರಿಕ್ಟರ್ ಮಾಪನ ಭೂಕಂಪನ ಸಂಭವಿಸಿದೆ‌‌ ಎಂದರು.

ರಾಜ್ಯ ನೈಸರ್ಗಿಕ ವಿಕೋಪ ಮ್ಯಾನೇಜ್ಮೆಂಟ್ ಸೆಲ್ ಹೇಳುವ ಪ್ರಕಾರ ಈ ಭೂಕಂಪನದಿಂದ ಯಾವುದೇ ತೊಂದರೆಗಳಿಲ್ಲ. ಆದರೂ ಜಿಲ್ಲಾ ವಿಪತ್ತು ನಿರ್ವಹಣಾ ತಂಡಕ್ಕೆ ಸನ್ನದ್ಧರಾಗಿರುವ ಸೂಚನೆ ನೀಡಿದ್ದೇನೆ. ಭೂಕಂಪನದಿಂದ ಹಾನಿಗೊಳಗಾದ ಮನೆಗಳ ವರದಿಯನ್ನು ನೀಡಲು ಪಿಡಿಒಗಳಿಗೆ ಸೂಚನೆ ನೀಡಿದ್ದೇನೆ. ಮತ್ತೆ ಇದೇ ರೀತಿ ಕಂಪನಗಳು ಸಂಭವಿಸಿದಲ್ಲಿ ಯಾರೂ ಮನೆಯೊಳಗೆ ಇರದೆ ಹೊರಗೆ ಬಂದು ಸುರಕ್ಷಿತ ಸ್ಥಳದಲ್ಲಿ ಇರಬೇಕು. ಭೂಕುಸಿತಗಳು ಉಂಟಾಗುವ ಸಾಧ್ಯತೆ ಇರುವುದರಿಂದ, ಈಗಾಗಲೇ ಹಾಟ್ ಸ್ಪಾಟ್ ಎಂದು ಗುರುತಿಸಿರುವ ಸ್ಥಳದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದ್ದೇನೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದ್ದಾರೆ.

Edited By : Manjunath H D
Kshetra Samachara

Kshetra Samachara

25/06/2022 05:16 pm

Cinque Terre

10.17 K

Cinque Terre

0

ಸಂಬಂಧಿತ ಸುದ್ದಿ