ಪಡುಬಿದ್ರಿ: ಇಲ್ಲಿಗೆ ಸಮೀಪದ ನಂದಿಕೂರು-ಕೊಳಚೂರು ರೈಲು ಹಳಿ ಪಕ್ಕದ ಗುಡ್ಡ ಪ್ರದೇಶದ ಒಣಹುಲ್ಲಿಗೆ ಮಂಗಳವಾರ ಬೆಂಕಿ ತಗುಲಿ, ಕೆಲಕಾಲ ಪರಿಸರದಲ್ಲಿ ಆತಂಕದ ವಾತಾವರಣ ಉಂಟಾಗಿತ್ತು.
ಬೆಂಕಿಯ ಕೆನ್ನಾಲಿಗೆ ಆವರಿಸುತ್ತಿದ್ದಂತೆಯೇ ದಾರಿ ಹೋಕರು ಬೆಂಕಿ ಶಮನ ಮಾಡಲು ಶ್ರಮಿಸಿದರು. ಆಕಸ್ಮಿಕವಾಗಿ ಬೆಂಕಿ ಬಿದ್ದಿರಬಹುದು ಅಥವಾ ಯಾರೋ ಸಿಗರೇಟು ಸೇದಿ ಎಸೆದಿರಬಹುದೆಂದು ಅಂದಾಜಿಸಲಾಗಿದೆ.
Kshetra Samachara
08/12/2020 05:24 pm