ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ವಿಸ್ಮಯ ಪ್ರಕೃತಿಯಲ್ಲೊಂದು ಪ್ರಕೃತಿ ನಿರ್ಮಿತ ದೇವಾಲಯ !

ವರದಿ : ಸಂದೇಶ್ ಶೆಟ್ಟಿ ಆಜ್ರಿ ಪಬ್ಲಿಕ್ ನೆಕ್ಸ್ಟ್ ಉಡುಪಿ.

ಉಡುಪಿ: ಆಧುನಿಕ ಯುಗದಲ್ಲಿ ಮನುಷ್ಯ ಎಷ್ಟೇ ಮುಂದುವರೆದರೂ ಕೂಡ ಪ್ರಕೃತಿಯ ಮುಂದೆ ತಲೆಬಾಗಲೇಬೇಕು ಎನ್ನುವುದಕ್ಕೆ ಪ್ರತ್ಯಕ್ಷ ಉದಾಹರಣೆ ಪಡುಮುಂಡು ಕಲ್ಲು ಗಣಪತಿ ದೇವಸ್ಥಾನ. ಕಲ್ಲು ಗಣಪತಿ ದೇವಸ್ಥಾನ ಮೂರು ಅಂತಸ್ತಿನ ಪ್ರಕೃತಿ ನಿರ್ಮಿತ ಕಲ್ಲುಬಂಡೆಗಳಿಂದ ಕೂಡಿದ ಗುಹಾಂತರ ದೇವಾಲಯವಾಗಿದೆ. ಬೃಹತಾಕಾರದ ಕಲ್ಲುಬಂಡೆಗಳ ನಡುವೆ ಶಿವ, ಪಾರ್ವತಿ, ಗಣಪತಿ ಇಲ್ಲಿ ವಿರಾಜಮಾನವಾಗಿ ನೆಲೆಸಿದ್ದಾರೆ. ಪಡುಮುಂಡು ಕಲ್ಲು ಗಣಪತಿ ದೇವಸ್ಥಾನ 12ನೇ ಶತಮಾನದಲ್ಲಿ ತುಳುನಾಡನ್ನು ಆಡಳಿತ ಮಾಡಿದ ಭೂತಾಳ ಪಾಂಡ್ಯ ಇಲ್ಲಿ ಶಿಲಾಮಯ ದೇವಸ್ಥಾನವನ್ನು ಸ್ಥಾಪಿಸಿದನೆಂಬ ಪ್ರತೀತಿ ಇದೆ.

ಪ್ರಕೃತಿಯ ಮಡಿಲಲ್ಲಿ ಹಸಿರು ಹೊದಿಕೆಯಲ್ಲಿ, ಸುಂದರವಾಗಿ ತಾನು ಭಕ್ತರನ್ನು ಆಕರ್ಷಿಸುವ ಈ ದೇವಸ್ಥಾನ, ತನ್ನದೇ ಆದ ವಿಶೇಷ ವೈಶಿಷ್ಟ್ಯವನ್ನು ಹೊಂದಿದೆ.

ಭಕ್ತಿಭಾವದಲ್ಲಿ ಈ ದೇವಸ್ಥಾನಕ್ಕೆ ಬಂದು ಹರಿಕೆಯನ್ನು ಹೊತ್ತರೆ ಇಷ್ಟಾರ್ಥಗಳು ಈಡೇರುತ್ತವೆ. ಅದನ್ನು ಬಿಟ್ಟು ಇದು ಲವರ್ಸ್ ಪಾರ್ಕ್, ಪ್ರವಾಸಿತಾಣ ಚಿತ್ರೀಕರಣ ತಾಣ ಎಂದು ಈ ಪ್ರಕೃತಿ ಸೌಂದರ್ಯದಲ್ಲಿ ಯಾವುದೇ ಕೆಲಸ ಮಾಡಿದರೂ ಅದಕ್ಕೆ ಸಕ್ಸಸ್ ಖಂಡಿತ ಇಲ್ಲ ಎನ್ನುತ್ತಾರೆ ಸ್ಥಳೀಯರು,ಇದಕ್ಕೆ ಮುಖ್ಯ ಉದಾಹರಣೆ ಸ್ಯಾಂಡಲ್ ವುಡ್ ನಾ ಅನೇಕ ಸಿನಿಮಾಗಳು ಇಲ್ಲಿ ಚಿತ್ರೀಕರಣ ಮಾಡಿ ಏನಾಗಿದೆ ಏನ್ನುವುದು ಪ್ರತ್ಯಕ್ಷವಾಗಿ ಕಣ್ಣು ಮುಂದೆ ಇದೆ.

ಈ ಪ್ರಕೃತಿ ಮಡಿಲಲ್ಲಿರುವ ದೇವಸ್ಥಾನಕ್ಕೆ ಸಾಕಷ್ಟು ಭಕ್ತರು ಹರಿದು ಬರುತ್ತಿದ್ದಾರೆ,ಇದು ತನ್ನದೇ ಆದ ಇತಿಹಾಸವನ್ನು ಒಳಗೊಂಡಿದೆ, ಈ ದೇವಸ್ಥಾನಕ್ಕೆ ಭಕ್ತಿಭಾವದಿಂದ ಪೂಜೆ ಸಲ್ಲಿಸಿದರೆ ಭಕ್ತರ ಇಷ್ಟಾರ್ಥ ಈಡೇರುತ್ತಾದೆ,ನೀವು ಈ ಪ್ರಕೃತಿ ಮಡಿಲಿನ ದೇವಸ್ಥಾನಕ್ಕೆ ಒಮ್ಮೆಯಾದರೂ ಭೇಟಿ ಕೊಡಲೇಬೇಕು.

Edited By : Nagesh Gaonkar
Kshetra Samachara

Kshetra Samachara

18/11/2020 07:58 am

Cinque Terre

27.75 K

Cinque Terre

3

ಸಂಬಂಧಿತ ಸುದ್ದಿ