ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಕಳ: ಸಿಡಿಲು ಬಡಿದು‌ ಪ್ರಗತಿಪರ ಕೃಷಿಕ ಸಾವು

ಕಾರ್ಕಳ: ಕಳೆದ ಕೆಲವು ದಿನಗಳಿಂದ ಜಿಲ್ಲೆಯ ಹಲವೆಡೆ ಗುಡುಗು ಸಹಿತ ಭಾರೀ ಮಳೆಯಾಗುತ್ತಿದೆ. ನಿನ್ನೆ ಸಂಜೆ ಕಾರ್ಕಳದ ಈದು ಗ್ರಾಮದ ನೂರಾಲ್ ಬೆಟ್ಟು ಎಂಬಲ್ಲಿ ಸಿಡಿಲು ಬಡಿದ ಪರಿಣಾಮ ಪ್ರಗತಿಪರ ಕೃಷಿಕ ಜಗೀಶ್ ಜೈನ್ ( 38) ಮೃತಪಟ್ಟಿದ್ದಾರೆ.ಅದೃಷ್ಟವಶಾತ್ ಈ ಸಂದರ್ಭ ಮನೆಯಲ್ಲಿ ವಯೋವೃದ್ಧ ತಂದೆ-  ತಾಯಿ ಇದ್ದರೂ ಅವರು ಅಪಾಯದಿಂದ ಪಾರಾ ಗಿದ್ದಾರೆ.

ಸಂಜೆ ವೇಳೆ ಮಳೆ ಆರಂಭಗೊಂಡಾಗ ಮನೆಯ ಮೆಟ್ಟಿಲಿಗೆ ನೀರು ಬೀಳದಂತೆ ಹಾಕಿದ್ದ ಕಬ್ಬಿಣದ ಶೀಟ್‌ ನ್ನು ಸರಿಪಡಿಸುತ್ತಿದ್ದಾಗ ಸಿಡಿಲು ಬಡಿದಿತ್ತು.ಪರಿಣಾಮವಾಗಿ ಅವರ ಒಂದು ಕೈ ಕರಟಿ ಹೋಗಿದೆ. ಸಿಡಿಲು ಬಡಿದಾಕ್ಷಣ ಪ್ರಜ್ಞೆ ತಪ್ಪಿ ಬಿದ್ದಿದ್ದ ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆಕರೆದೊಯ್ಯಲಾಯಿತಾದರೂ ಅದಾಗಲೇ ಮೃತ ಪಟ್ಟಿರುವುದಾಗಿ ವೈದ್ಯರು ತಿಳಿಸಿದರು.ಜಿಗೀಶ್‌ ಅವರು ಅವಿವಾಹಿರಾರಾಗಿದ್ದು, ಪ್ರಗತಿಪರ ಕೃಷಿಕರಾಗಿದ್ದರು.

Edited By : Nirmala Aralikatti
Kshetra Samachara

Kshetra Samachara

26/04/2022 10:04 am

Cinque Terre

9.48 K

Cinque Terre

0

ಸಂಬಂಧಿತ ಸುದ್ದಿ