ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ಮಣಿಪಾಲದಲ್ಲಿ ಭೂ ಕುಸಿತ: ಸನಿಹದ ಅಪಾರ್ಟ್ ಮೆಂಟ್ ನಿವಾಸಿಗಳಿಗೆ ತೆರವು ಮಾಡಲು ಸೂಚನೆ

ಮಣಿಪಾಲ: ಮಣಿಪಾಲದಲ್ಲಿ ಭಾರೀ ಭೂ ಕುಸಿತ ಕಾಣಿಸಿಕೊಂಡಿದೆ. ಮಲ್ಪೆ ಮೊಣಕಾಲ್ಮೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಭೂ ಕುಸಿತ ಆಗಿದ್ದು, ಪಕ್ಕದಲ್ಲೇ ಇರುವ ಪ್ರೀಮಿಯರ್ ಅಪಾರ್ಟ್ಮೆಂಟ್ ಕಟ್ಟಡದ ಪಕ್ಕದಲ್ಲಿ ಮಣ್ಣು ಕುಸಿದು ಆತಂಕ ಸೃಷ್ಟಿಯಾಗಿದೆ. ಹೆದ್ದಾರಿ ಕಾಮಗಾರಿಯ ಸಂದರ್ಭ ನೀರಿನ ಸಹಜ ಹರಿವಿಗೆ ತಡೆಯೊಡ್ಡಿದ ಕಾರಣ ಈ ಭೂ ಕುಸಿತ ಉಂಟಾಗಿದ್ದು, ಹೆದ್ದಾರಿ ಕಾಮಗಾರಿ ನಿರ್ವಹಣೆ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹಿಂದೆಯೂ ಇದೇ ಪ್ರದೇಶದಲ್ಲಿ ಭೂಕುಸಿತ ಕಾಣಿಸಿಕೊಂಡಿತ್ತು. ಸದ್ಯ, ಭೂಕುಸಿತ ಜಾಗದಲ್ಲಿರುವ ಕಟ್ಟಡದಲ್ಲಿರುವ ಎಲ್ಲರಿಗೂ ಮನೆ ತೆರವು ಮಾಡುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಮುಂಜಾಗರೂಕತಾ ಕ್ರಮವಾಗಿ ರಾಷ್ಟ್ರೀಯ ಹೆದ್ದಾರಿಯ ಒಂದು ಭಾಗವನ್ನು ಸಂಚಾರಕ್ಕೆ ನಿರ್ಬಂಧಿಸಲಾಗಿದೆ. ತಹಶೀಲ್ದಾರ್, ನಗರಸಭೆ ಕಮಿಷನರ್ ಸೇರಿ ಹಲವಾರು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Edited By :
Kshetra Samachara

Kshetra Samachara

22/09/2020 10:04 am

Cinque Terre

29.62 K

Cinque Terre

0

ಸಂಬಂಧಿತ ಸುದ್ದಿ