ಪುತ್ತಿಗೆ: ಉಡುಪಿ ಜಿಲ್ಲೆಯಲ್ಲಿ ಮಹಾಮಳೆ ಅಲ್ಲಲ್ಲಿ ಅವಾಂತರವನ್ನೇ ಸೃಷ್ಟಿಸಿದೆ. ತಾಲೂಕಿನ ಹಲವೆಡೆ ಎಲ್ಲವೂ ಮುಳುಗಡೆಯಾಗಿದೆ. ಮಳೆ ನಿಂತಿದೆ, ಆದ್ರೆ ನೆರೆ ಇಳಿದಿಲ್ಲ. ಮಳೆಯ ಪ್ರಹಾರ ಒಂದೊಂದಾಗಿಯೇ ಹೊರಬರುತ್ತಿವೆ.
ನೆರೆ ಇಳಿಯುತ್ತಿದ್ದಂತೆಯೇ ಮನೆಗಳೂ ಕುಸಿಯ ಲಾರಂಭಿಸಿವೆ. ಪುತ್ತಿಗೆಯ ಉದಯ ಕುಲಾಲ್ ಎಂಬವರ ಮನೆ ಇದಾಗಿದ್ದು, ನೀರಿನ ರಭಸಕ್ಕೆ ಮನೆ ಸಂಪೂರ್ಣ ತೊಯ್ದು ಹೋಗಿತ್ತು.
ತೇವಗೊಂಡ ಗೋಡೆ ಕುಸಿದು ಬಿದ್ದಿದ್ದು, ಮನೆ ಸಂಪೂರ್ಣವಾಗಿ ಧರಾಶಾಹಿಯಾಗಿದೆ. ಮನೆ ಮಂದಿ ಸುರಕ್ಷಿತ ಸ್ಥಳಕ್ಕೆ ಶಿಫ್ಟ್ ಆಗಿದ್ದರು. ಹಾಗಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
Kshetra Samachara
22/09/2020 09:51 am