ಕಾಪು : ರಾತ್ರಿವಿಡೀ ಸುರಿದ ಧಾರಾಕಾರ ಮಳೆಗೆ ಮನೆಯ ಗೋಡೆ ಕುಸಿದು ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದ್ದು,ಮನೆ ಮಂದಿ ಪ್ರಾಣಾಪಾಯದಿಂದ ಪಾರಾದ ಘಟನೆ ಉಚ್ಚಿಲ ಬಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಟ್ಟಿಂಗೇರಿ ರಸ್ತೆಯ ಮುಳ್ಳಗುಡ್ಡೆ ಎಂಬಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ.
ಕಟ್ಟಿಂಗೇರಿ ನಿವಾಸಿ ಆಮಿನ ಮೈದಿನ್ ಎಂಬವರಿಗೆ ಸೇರಿದ ಮನೆ ಇದಾಗಿದ್ದು,ಮನೆ ಗೋಡೆ ಕುಸಿತದಿಂದ ಆತಂಕಕ್ಕೀಡಾಗಿದ್ದಾರೆ.
ಸ್ಥಳಕ್ಕೆ ಬಡಾ ಗ್ರಾ.ಪಂ ಗ್ರಾಮ ಲೆಕ್ಕಿಗ ಜಗದೀಶ್ ಭೇಟಿ ನೀಡಿ ಪರಿಹಾರ ದೊರಕಿಸಿ ಕೊಡುವುದಾಗಿ ಭರವಸೆ ನೀಡಿದ್ದಾರೆ.
Kshetra Samachara
22/09/2020 02:23 pm