ಮಂಗಳೂರು: ಹೆಬ್ಬಾವು ಕಚ್ಚಿ ಗಾಯಗೊಳಿಸಿದರೂ ಬಾಲಕನೋರ್ವ ವಿಚಲಿತನಾಗದೆ ಹಾವಿನ ತಲೆಯ ಮೇಲೆ ಕಾಲಿಟ್ಟು, ನಂತರ ಹಿಡಿಯಲು ಸಹಾಯ ಮಾಡಿದ ಘಟನೆ ಮಂಗಳೂರಿನ ಮಣ್ಣಗುಡ್ಡೆ ಬಳಿ ನಡೆದಿದೆ. ಮಣ್ಣಗುಡ್ಡೆ ಸಮೀಪದ ವಾದಿರಾಜ ನಗರದ ಹತ್ತು ವರ್ಷದ ಸಂಕಲ್ಪ ಜಿ. ಪೈ ಎಂಬಾತ ಮನೆ ಸಮೀಪದ ದೇವಸ್ಥಾನಕ್ಕೆ ಪೂಜೆಗೆಂದು ಹೋಗುತ್ತಿದ್ದ. ಇದೇ ವೇಳೆ ಮನೆ ಹಿಂಭಾಗದ ಚರಂಡಿಯ ಪೈಪ್ ನಲ್ಲಿದ್ದ ಹೆಬ್ಬಾವು ದಿಢೀರನೆ ಬಾಲಕನ ಕಾಲಿಗೆ ಕಚ್ಚಿತು. ಕೂಡಲೇ ಇನ್ನೊಂದು ಕಾಲಿನಿಂದ ಹಾವಿನ ತಲೆಯ ಭಾಗಕ್ಕೆ ತುಳಿದ ಕಾರಣ ಹಾವು ವಾಪಸ್ ಪೈಪಿನ ಒಳಗೆ ಹೋಗಿದೆ. ಬಾಲಕ ಬೊಬ್ಬೆ ಹಾಕಿದಾಗ ಅಕ್ಕ ಪಕ್ಕದ ಜನರು ಬಂದು ಬಳಿಕ ಹಾವನ್ನು ಹಿಡಿದು ಪಿಲಿಕುಳ ನಿಸರ್ಗಧಾಮಕ್ಕೆ ರವಾನಿಸಲಾಗಿದೆ
Kshetra Samachara
10/10/2020 04:49 pm