ಉಡುಪಿ: ಅಖಿಲ ಕರ್ನಾಟಕ ಮಹಿಳಾ ಸೌಂದರ್ಯ ತಜ್ಞೆಯರ ಸಂಘದ ಉಡುಪಿ ಘಟಕ ದಶಮಾನೋತ್ಸವ ಸಂಭ್ರಮಾಚರಣೆಯಲ್ಲಿದೆ. ಉಡುಪಿ ಜಿಲ್ಲಾ ಘಟಕ ಸ್ಥಾಪನೆಯಾಗಿ 10 ವರ್ಷ ಪೂರ್ಣವಾದ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ನಗರದ ಶೇಷಶಯನ ಹಾಲ್ ನಲ್ಲಿ ಆಯೋಜಿಸಲಾಗಿತ್ತು.
ಮಣಿಪಾಲದ ಧನ್ವಂತರಿ ಕಾಲೇಜ್ ಆಫ್ ನರ್ಸಿಂಗ್ ನ ಪ್ರತಿಭಾ ಲಿಡಿಯಾ, ಎಂಇಟಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಸ್ಥೆ ಡಾ. ಜುನೇದಾ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಕಲಾವಿದೆ ಮಂಜರಿ ಚಂದ್ರ, ಅಖಿಲ ಕರ್ನಾಟಕ ಮಹಿಳಾ ಸೌಂದರ್ಯ ತಜ್ಞೆಯರ ಸಂಘದ ಸ್ಥಾಪಕರಾದ ಮರಿಯಾ ಹೆರಾಲ್ಡ್, ಜಿಲ್ಲಾ ಕಾರ್ಯದರ್ಶಿ ಲತಾ ವಾದಿರಾಜ್ ಉಪಸ್ಥಿತರಿದ್ದರು.
ಬ್ಯೂಟಿ ಪಾರ್ಲರ್ ನಡೆಸುತ್ತಿರುವ ಜಿಲ್ಲೆಯ ನೂರಾರು ತಜ್ಞೆಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕೊರೋನಾ ಕಾಲದಲ್ಲಿ ಬ್ಯೂಟೀಷಿಯನ್ ಗಳು ಸಾಕಷ್ಟು ಸಮಸ್ಯೆಗಳನ್ನು ಅನುಭವಿಸಬೇಕಾಯ್ತು. ಲಾಕ್ ಡೌನ್ ಸಂದರ್ಭ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದು ಈಗ ಕೊಂಚ ಚೇತರಿಕೆ ಕಂಡುಕೊಳ್ಳುತ್ತಿದ್ದೇವೆ. ಸರಕಾರ ನಮ್ಮ ಕೆಲ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಈ ಸಂದರ್ಭದಲ್ಲಿ ಒತ್ತಾಯಿಸಲಾಯಿತು. ಸಂಘಟನೆ ಸದಸ್ಯೆಯರು ಒಗ್ಗಟ್ಟಿನಿಂದ ಇರಬೇಕು. ನಿಮ್ಮ ಸಮಸ್ಯೆಗಳಿಗೆ ಸಂಘ ಸದಾ ಸ್ಪಂದಿಸುತ್ತದೆ ಎಂದು ಉಡುಪಿ ಜಿಲ್ಲಾಧ್ಯಕ್ಷೆ ವೇದ ಸಂಜೀವ ಸುವರ್ಣ ಕರೆ ನೀಡಿದರು.
Kshetra Samachara
02/10/2021 12:48 pm