ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಮುತಾಲಿಕ್‌ಗೆ ಅಡ್ಡಿ: ಕೊರಗಜ್ಜನ ಮೊರೆಹೋದ ಹಿಂದೂ ಕಾರ್ಯಕರ್ತರು!

ಕುಂದಾಪುರ: ಕಳೆದ ವಾರ ಗಂಗೊಳ್ಳಿಯಲ್ಲಿ ವೀರೇಶ್ವರ ದೇವಸ್ಥಾನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹಿಂದೂ ಜಾಗರಣ ವೇದಿಕೆ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಭಾಗವಹಿಸದಂತೆ ಜಿಲ್ಲಾಡಳಿತ ನಿಷೇಧ ಹೇರಿತ್ತು. ಆದರೆ ಇದರಿಂದ ಕೆಂಡಾಮಂಡಲವಾಗಿರುವ ಹಿಂದೂ ಕಾರ್ಯಕರ್ತರು ಮುತಾಲಿಕ್ ಕಾರ್ಯಕ್ರಮಕ್ಕೆ ಆಗಮಿಸದಂತೆ ಅಡ್ಡಿಪಡಿಸಿದ ಕಾಣದ ಕೈಗಳ ವಿರುದ್ಧ ಕೊರಗಜ್ಜನ ಮೊರೆಹೋಗಿ ನ್ಯಾಯಕ್ಕಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಗಂಗೊಳ್ಳಿ ಜಾಗೃತ ಹಿಂದು ಕಾರ್ಯಕರ್ತರು ಗಂಗೊಳ್ಳಿಯ ವೀರೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ನಂತರ 7 ಕಿ.ಮೀ ಪಾದಯಾತ್ರೆ ಮೂಲಕ ಸಾಗಿ ಮುಳ್ಳಿಕಟ್ಟೆ ಕೊರಗಜ್ಜನ ಸನ್ನಿಧಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಗಂಗೊಳ್ಳಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಅನುಮತಿ ಸಿಕ್ಕಿದ್ದರೂ ಕೆಲವು ಕಾಣದ ರಾಜಕೀಯ ವ್ಯವಸ್ಥೆಗಳಿಂದ ಕೊನೆ ಕ್ಷಣದಲ್ಲಿ ಪ್ರಮೋದ್ ಮುತಾಲಿಕ್ ಉಡುಪಿ ಜಿಲ್ಲೆಗೆ ನಿರ್ಬಂಧ ಹೇರಲಾಗಿತ್ತು. ಇದರಿಂದ ಕಾರ್ಯಕ್ರಮ ಅಸ್ತವ್ಯಸ್ತ ಆಗುವಂತೆ ಮಾಡಿದ ಕಾಣದ ಕೈಗಳ ವಿರುದ್ಧ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.

Edited By :
Kshetra Samachara

Kshetra Samachara

20/04/2022 11:52 am

Cinque Terre

12.42 K

Cinque Terre

0

ಸಂಬಂಧಿತ ಸುದ್ದಿ