ಮಂಗಳೂರು:ಅಂತರಾಷ್ಟ್ರೀಯ ಯೋಗ ದಿನಾಚರಣೆ (ಜೂ. 21) ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕರಿಗೆ ಪೂರ್ವಭಾವಿ ಯೋಗ ತರಬೇತಿ ಶಿಬಿರ, ಜಿಲ್ಲಾ ಗೃಹರಕ್ಷಕ ದಳದ ಶಿಬಿರ, ಸಮಾದೇಷ್ಟರಾದ ಡಾ. ಮುರಳೀ ಮೋಹನ್ ಚೂಂತಾರು ರವರ ನೇತೃತ್ವದಲ್ಲಿ ನಡೆಯಿತು. ಗುರುವಾರ ನಗರದ ಮೇರಿಹಿಲ್ ಜಿಲ್ಲಾ ಗೃಹರಕ್ಷಕದಳ ಕಚೇರಿಯಲ್ಲಿ ಖ್ಯಾತ ಯೋಗ ಗುರು ಗೋಪಾಲಕೃಷ್ಣ ದೇಲಂಪಾಡಿ ಮತ್ತು ಯೋಗ ಶಿಕ್ಷಕಿ ಸುಮಾರವರ ಮಾರ್ಗದರ್ಶನದಲ್ಲಿ ನಡೆಯಿತು.
ಯೋಗ ಮನುಷ್ಯನ ಆರೋಗ್ಯಕ್ಕೆ ಅತೀ ಅವಶ್ಯಕ. ದೈಹಿಕ ಅರೋಗ್ಯ ಮತ್ತು ಮಾನಸಿಕ ನೆಮ್ಮದಿಗೆ ಯೋಗವನ್ನು ಪ್ರತಿಯೊಬ್ಬರು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಗೋಪಾಲಕೃಷ್ಣ ದೇಲಂಪಾಡಿ ಕರೆ ನೀಡಿದರು. ದಿನದ 8 ಗಂಟೆಗಳ ಕಾಲ ನಿಂತುಕೊಂಡು ಒತ್ತಡದ ಕೆಲಸ ಮಾಡುವ ಗೃಹರಕ್ಷಕರಿಗೆ ಯೋಗ ಅನಿವಾರ್ಯ ಎಂದರು. ಸುಮಾರು 25 ಮಂದಿ ಗೃಹರಕ್ಷಕರು ಈ ಶಿಬಿರದಲ್ಲಿ ಭಾಗವಹಿಸಿದರು.
Kshetra Samachara
16/06/2022 02:48 pm