ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮೂವರು ಪಿಎಫ್ಐ ಮುಖಂಡರು ವಶಕ್ಕೆ

ಮಂಗಳೂರು: ನಗರದಲ್ಲಿ ಪಿಎಫ್ಐ, ಎಸ್‌ಡಿಪಿಐ ದಾಳಿಯಲ್ಲಿ ರಾಜ್ಯ ಪೊಲೀಸರು ಮೂವರು ಪಿಎಫ್ಐ ಮುಖಂಡರನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ.

ಅಶ್ರಫ್ ಎ.ಕೆ, ಮೊಯ್ದೀನ್ ಹಳೆಯಂಗಡಿ, ನವಾಝ್ ಕಾವೂರು ರಾಜ್ಯ ಪೊಲೀಸರಿಂದ ಬಂಧನಕ್ಕೊಳಗಾದವರು.

ಇಂದು ನಸುಕಿನ ವೇಳೆ 3.30ಗಂಟೆಗೆ ಎನ್ಐಎ ತಂಡ ಹಾಗೂ ರಾಜ್ಯ ಪೊಲೀಸರು ಏಕಕಾಲದಲ್ಲಿ ಪಿಎಫ್ಐ, ಎಸ್‌ಡಿಪಿಐ ಜಿಲ್ಲಾ ಕಚೇರಿಗೆ ಹಾಗೂ ಪಿಎಫ್ಐ ಮುಖಂಡ ಅಬ್ದುಲ್ ಖಾದರ್ ಕುಳಾಯಿ ಮನೆಗೆ ದಾಳಿ‌ ನಡೆಸಿದ್ದಾರೆ. ಈ ವೇಳೆ ಹಲವು ಮಹತ್ವದ ದಾಖಲೆಯನ್ನು ವಶಪಡಿಸಿಕೊಳ್ಳಲಾಗಿದೆ. ಇದೇ ವೇಳೆ ಜಿಲ್ಲೆಯ ಆರು ಕಡೆಗಳಲ್ಲಿ ದಾಳಿ‌ ನಡೆಸಲಾಗಿದೆ ಎಂದು ಎಸ್‌ಡಿಪಿಐ ಮುಖಂಡ ಅಥಾವುಲ್ಲಾ ಜೋಕಟ್ಟೆ ತಿಳಿಸಿದ್ದಾರೆ.

Edited By : Shivu K
Kshetra Samachara

Kshetra Samachara

22/09/2022 11:19 am

Cinque Terre

5.98 K

Cinque Terre

1

ಸಂಬಂಧಿತ ಸುದ್ದಿ