ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ:ಗಣೇಶೋತ್ಸವ ಹಿನ್ನಲೆ:ನಗರದಲ್ಲಿ ವೀಕೆಂಡ್ ಪೊಲೀಸ್ ಚೆಕ್ಕಿಂಗ್

ಕುಂದಾಪುರ: ಗಣೇಶೋತ್ಸವ ಮೆರವಣಿಗೆ ಮತ್ತು ವೀಕೆಂಡ್ ಹಿನ್ನೆಲೆಯಲ್ಲಿ ಕುಂದಾಪುರದಲ್ಲಿ ಪೊಲೀಸರು ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾರೆ.ನಗರದಲ್ಲಿ ಗಣೇಶೋತ್ಸವ ಮೆರವಣಿಗೆ ಹಿನ್ನೆಲೆಯಲ್ಲಿ ಶಾಸ್ತ್ರಿ ವೃತ್ತದಲ್ಲಿ ಪೋಲಿಸರಿಂದ ವಾಹನ ತಪಾಸಣೆ ನಡೆಯುತ್ತಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಹೊರ ಜಿಲ್ಲೆಗಳ ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾರೆ.ಡಿ.ವೈ.ಎಸ್.ಪಿ ಶ್ರೀಕಾಂತ್ ನೇತೃತ್ವದಲ್ಲಿ ಬ್ಯಾರಿಕೇಡ್ ಅಳವಡಿಸಿ ತಪಾಸಣೆ ನಡೆಯುತ್ತಿದೆ.

ರಾಜ್ಯ ಮತ್ತು ಹೊರರಾಜ್ಯದ ವಾಹಗಳ ಮೇಲೆ ಪೋಲಿಸರ ಕಣ್ಗಾವಲು ಇರಿಸಿದ್ದಾರೆ.ಜಿಲ್ಲೆಯಲ್ಲಿ ಇನ್ನೂ ಮೂರು ದಿನ ಗಣೇಶನ ವಿಸರ್ಜನೆ ನಡೆಯಲಿವೆ.

Edited By : PublicNext Desk
Kshetra Samachara

Kshetra Samachara

04/09/2022 06:54 am

Cinque Terre

5.39 K

Cinque Terre

0

ಸಂಬಂಧಿತ ಸುದ್ದಿ