ಉಡುಪಿ: ಗಣೇಶ ಹಬ್ಬದ ಆಚರಣೆಯ ಪ್ರಯುಕ್ತ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ಜೋಡುರಸ್ತೆ, ಬೈಲೂರು, ಕೌಡೂರು ಹಾಗೂ ನೀರೆ ಗ್ರಾಮ, ಕಾಪು ತಾಲೂಕಿನ ಪುರಸಭಾ ವ್ಯಾಪ್ತಿ, ಕಾಪು ಪಡು, ಮಲ್ಲಾರು, ಮೂಳೂರು, ಉಳಿಯಾರಗೋಳಿ ಹಾಗೂ ಮಜೂರು ಗ್ರಾಮ, ಕುಂದಾಪುರ ತಾಲೂಕು ನಗರ ಠಾಣಾ ವ್ಯಾಪ್ತಿಯ ಕಸಬಾ, ವಡೇರಹೋಬಳಿ ಹಾಗೂ ಗಂಗೊಳ್ಳಿ ಠಾಣಾ ವ್ಯಾಪ್ತಿಯ ಗಂಗೊಳ್ಳಿ, ಗುಜ್ಜಾಡಿ ಮತ್ತು ತ್ರಾಸಿ ಗ್ರಾಮಗಳ ವ್ಯಾಪ್ತಿಯಲ್ಲಿ ಬಾರ್ ಮತ್ತು ವೈನ್‌ಶಾಪ್‌ಗಳು ತೆರೆದಿದ್ದಲ್ಲಿ ಮದ್ಯಪಾನಾಸಕ್ತರು ಮದ್ಯಪಾನ ಮಾಡಿ ಗಲಭೆ ಸೃಷ್ಟಿಸುವ ಸಾಧ್ಯತೆ ಇರುವ ಹಿನ್ನೆಲೆ, ಆಬಕಾರಿ ಕಾಯ್ದೆಯನ್ವಯ ಈ ಮೇಲ್ಕಂಡ ಗ್ರಾಮಗಳ ವ್ಯಾಪ್ತಿಯಲ್ಲಿ ಮದ್ಯಮಾರಾಟದ ಸನ್ನದುಗಳನ್ನು ಹೊಂದಿರುವ ಬಾರ್ & ರೆಸ್ಟೋರೆಂಟ್ ಮತ್ತು ವೈನ್ ಶಾಪ್‌ಗಳಲ್ಲಿ ಸೆಪ್ಟೆಂಬರ್ 4 ರ ಬೆಳಗ್ಗೆ 6 ರಿಂದ ರಾತ್ರಿ 12 ರವರೆಗೆ ಅಬಕಾರಿ ಸನ್ನದುಗಳನ್ನು ಮುಚ್ಚಲು ಆದೇಶಿಸಿ, ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಆದೇಶಿಸಿರುತ್ತಾರೆ.
Kshetra Samachara
03/09/2022 07:02 pm