ಕಾಪು: ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮಕ್ಕೆ ಸಿದ್ಧತೆ ಆಗುತ್ತಿರುವಂತೆಯೇ ಅಮಲು ಪದಾರ್ಥ ಸೇವಿಸುವವರಿಗೆ ಹಾಗೂ ಸಂಘಟಕರಿಗೆ ಪೊಲೀಸ್ ಎಚ್ಚರಿಕೆ ನೀಡಿದ್ದು, ಯಾವುದೇ ಸಂದರ್ಭ ಅಮಲು ಪದಾರ್ಥ ಸೇವಿಸಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತಿಲ್ಲ. ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆಯನ್ನು ಕಾಪು ಸರ್ಕಲ್ ಇನ್ಸ್ ಪೆಕ್ಟರ್ ಪೂವಯ್ಯ ನೀಡಿದ್ದಾರೆ.
ಶ್ರೀ ಗಣೇಶೋತ್ಸವ ಹಿನ್ನಲೆಯಲ್ಲಿ ಪಡುಬಿದ್ರಿ ಠಾಣೆಯಲ್ಲಿ ನಡೆದ ಸರ್ವಧರ್ಮೀಯರ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಉನ್ನತ ಪೊಲೀಸ್ ಅಧಿಕಾರಿಗಳ ಸೂಚನೆಯಂತೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮವನ್ನು ಹತ್ತು ಗಂಟೆಯ ಒಳಗೆ ಮುಗಿಸುವಂತೆ ಹಾಗೂ ಪೆಂಡಾಲ್ ಒಳಭಾಗದಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ, ಶ್ರೀ ಗಣೇಶ ಮೂರ್ತಿಗೆ ಕಾರ್ಯಕರ್ತರ ಕಣ್ಗಾವಲು, ನಿಗದಿತ ವ್ಯಾಪ್ತಿಯೊಳಗೆ ಧ್ವನಿ ವರ್ಧಕ ಬಳಕೆ, ಮೆರವಣಿಗೆ ವೇಳೆ ಬಣ್ಣ ಸಹಿತ ಯಾವುದೇ ಲಿಕ್ವಿಡ್ ಎರಚುವುದು ಮಾಡುವಂತಿಲ್ಲ. ಯಾವುದೇ ಜಾತಿ- ಧರ್ಮ ನಿಂದನೆಯ ವೇಷ ಹಾಕುವಂತಿಲ್ಲ, ವಿದ್ಯುತ್ ಬಳಕೆಗೆ ಮೆಸ್ಕಾಂ ಪರವಾನಿಗೆ ಅಗತ್ಯ ಎಂಬಿತ್ಯಾದಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿದ್ದಾರೆ.
Kshetra Samachara
28/08/2022 01:29 pm