ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು ಏರ್‌ಪೋರ್ಟ್‌ನಲ್ಲಿ‌ ಆತಂಕ ತಂದ ಯುವಕ- ಯುವತಿಯ ಚಾಟಿಂಗ್; ವಿಮಾನ ಯಾನ ತಡೆಹಿಡಿದು ತಪಾಸಣೆ

ಮಂಗಳೂರು: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಯುವಕ- ಯುವತಿ ನಡುವಿನ ಚಾಟಿಂಗ್ ವಿಮಾನ‌ ನಿಲ್ದಾಣದ ಭದ್ರತೆಗೆ ತೊಡಕಾಗಿದೆ ಎಂಬ ಆತಂಕದಿಂದ ವಿಮಾನ ಯಾನವನ್ನೇ ನಿಲ್ಲಿಸಿ ಪ್ರಯಾಣಿಕರನ್ನು ಕೆಳಗಿಳಿಸಿ ತಪಾಸಣೆ ಮಾಡಿರುವ ಘಟನೆ ಇಂದು ಮಧ್ಯಾಹ್ನ ‌ನಡೆದಿದೆ.

ಮುಂಬೈಗೆ ತೆರಳಬೇಕಾದ ಯುವಕ ಹಾಗೂ ಬೆಂಗಳೂರಿಗೆ ತೆರಳಬೇಕಾದ ಯುವತಿ ವಿಮಾನ ನಿಲ್ದಾಣದಲ್ಲಿ ಮೊಬೈಲ್ ಚಾಟಿಂಗ್‌ನಲ್ಲಿ ಮಾಡುತ್ತಿದ್ದರು. ಇವರು ಮಾಡುತ್ತಿದ್ದ ಚಾಟಿಂಗ್‌ನಲ್ಲಿ ಆತಂಕ್ಕೀಡಾಗುವ ಆಕ್ಷೇಪಾರ್ಹ ಪದ ಬಳಕೆ ಇದೆಯೆಂದು ಅಲ್ಲಿಯೇ ಇದ್ದ ಮತ್ತೋರ್ವ ಪ್ರಯಾಣಿಕರೋರ್ವರು ವಿಮಾನ ನಿಲ್ದಾಣದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಎಚ್ಚೆತ್ತ ವಿಮಾನ ನಿಲ್ದಾಣದ ಅಧಿಕಾರಿಗಳು ಮುಂಬೈ ವಿಮಾನ ಯಾನವನ್ನೇ ರದ್ದು ಮಾಡಿದ್ದಾರೆ. ಬಳಿಕ ವಿಮಾನವನ್ನು ತೀವ್ರ ತಪಾಸಣೆಗೊಳಪಡಿಸಿದ್ದಾರೆ.

ಬಳಿಕ ಈ ಚ್ಯಾಟಿಂಗ್‌ಗೂ ವಿಮಾನ ನಿಲ್ದಾಣದ ಭದ್ರತೆಗೆ ಯಾವುದೇ ತೊಂದರೆಯಿಲ್ಲವೆಂದು ವಿಮಾನ ಸಂಜೆ 5 ಗಂಟೆಗೆ ಮುಂಬೈ ಕಡೆಗೆ ಪ್ರಯಾಣ ಬೆಳೆಸಿದೆ. ಸದ್ಯ ಯುವಕ‌- ಯುವತಿ ಭದ್ರತಾ ಸಿಬ್ಬಂದಿ ವಶದಲ್ಲಿದ್ದಾರೆ.

Edited By : Vijay Kumar
PublicNext

PublicNext

14/08/2022 08:40 pm

Cinque Terre

26.15 K

Cinque Terre

2

ಸಂಬಂಧಿತ ಸುದ್ದಿ