ಕುಂದಾಪುರ: ತೀವ್ರತರವಾದ ಮಳೆಯ ಹಿನ್ನಲೆಯಲ್ಲಿ ಕಳೆದ ತಿಂಗಳು ನೀಡಲಾದ ಎಂಟು ದಿನಗಳ ರಜೆಯನ್ನು ಭರ್ತಿ ಮಾಡಲು ಮಳೆಗಾಲ ಮುಗಿಯುವ ಮುನ್ನವೇ ಆರಂಭಿಸಲು ಆದೇಶ ನೀಡಲಾಗಿದ್ದು, ಅಂಗನವಾಡಿ ಕಾರ್ಯಕರ್ತರು ಹಾಗೂ ಮಕ್ಕಳ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಮಳೆಗಾಲ ಮುಗಿದ ಬಳಿಕ ಭಾನುವಾರ ಅಂಗನವಾಡಿ ತೆರೆಯುವ ಬದಲು ಇಷ್ಟು ತುರ್ತಾಗಿ ತೆರೆಯಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅದೇಕೆ ಅಷ್ಟೊಂದು ಆಸಕ್ತಿ ವಹಿಸಿದೆ ಎನ್ನುವ ಪ್ರಶ್ನೆ ಇದೀಗ ಉದ್ಭವಿಸಿದೆ.
ತೀವ್ರ ವರುಣಾಘಾತದಿಂದ ತತ್ತರಿಸಿದ್ದ ಕರಾವಳಿ ಜಿಲ್ಲೆಯಾದ ಉಡುಪಿಯಲ್ಲಿ ಶಾಲೆ ಹಾಗೂ ಅಂಗನವಾಡಿಗಳಿಗೆ ಜಿಲ್ಲಾಡಳಿತ ಏಳು ದಿನ ಹಾಗೂ ಎ.ಸಿಯವರು ಒಂದು ದಿನ ಸೇರಿದಂತೆ ಎಂಟು ದಿನಗಳ ರಜೆಯನ್ನು ಘೋಷಿಸಿದ್ದರು. ಆ ರಜೆಗಳನ್ನು ಶೈಕ್ಷಣಿಕ ವರ್ಷಾಂತ್ಯದ ಒಳಗೆ ಭರ್ತಿ ಮಾಡುವುದು ಉದ್ದೇಶವಾಗಿತ್ತು.
ಕುಂದಾಪುರ ತಾಲೂಕಿನಲ್ಲಿರುವ ಅಂಗನವಾಡಿಗಳಿಗೆ ಆಗಸ್ಟ್ 7ರಿಂದ ಪ್ರತಿ ಭಾನುವಾರ ಅಂಗನವಾಡಿಗಳನ್ನು ತೆರೆಯುವಂತೆ ಮಹಿಳಾ ಮತ್ತು ಮಕ್ಕಳ ಕಲದಯಾಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರು ಆದೇಶ ನೀಡಿದ್ದರು. ಇದರಿಂದ ಕಂಗಾಲಾದ ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕಿಯರು ಭಾನುವಾರ ಅಂಗನವಾಡಿ ಗಳನ್ನು ತೆರೆದಿದ್ದಾರೆ. ಆದರೆ ಮಕ್ಕಳನ್ನು ಮಾತ್ರ ಪೋಷಕರು ಶಾಲೆಗೆ ಕಳಿಸಿಲ್ಲ. ಪರಿಣಾಮವಾಗಿ ಮಕ್ಕಳಿಗೆ ಅಂಗನವಾಡಿಯ ಮಧ್ಯಾಹ್ನದ ಪೌಷ್ಟಿಕಾಂಶದ ಆಹಾರ ತಪ್ಪಿದಂತಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಉಡುಪಿ ಜಿಲ್ಲಾಧಿಕಾರಿ ಮಳೆ ಕಡಿಮೆಯಾದ ಬಳಿಕ ಅಂಗನವಾಡಿಗಳನ್ನು ಭಾನುವಾರ ತೆರೆಯುವಂತೆ ಇಲಾಖೆಯ ಉಪ ನಿರ್ದೇಶಕರಿಗೆ ಸೂಚಿಸಲಾಗುವುದು ಎಂದು ಹೇಳಿದ್ದಾರೆ. ಸಿಡಿಪಿಒ ಪ್ರತಿಕ್ರಿಯಿಸಿ ಭಾನುವಾರ ಅಂಗನವಾಡಿ ತೆರೆಯುವುದನ್ನು ಖಡ್ಡಾಯ ಮಾಡಿಲ್ಲ ಎಂದಿದ್ದಾರೆ. ಆದರೆ ಹೆಸರು ಹೇಳಲಿಚ್ಚಿಸದ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಕ್ರಿಯಿಸಿ, ನಮಗೆ ಮಕ್ಕಳು ಶಾಲೆಗೆ ಬರದಿರುವ ಕಾರಣ, ಮಕ್ಕಳಿಗೆ ಆಹಾರ ನೀಡಲಾಗುತ್ತಿಲ್ಲ. ಮನೆ ಮನೆಗೆ ಹೋಗಿ ಆಹಾರ ಕೊಡಲೂ ಸಾಧ್ಯವಾಗುತ್ತಿಲ್ಲ. ಮಳೆ ಕಡಿಮೆಯಾದ ಮೇಲೆ ಭಾನುವಾರ ಶಾಲೆ ಆರಂಭಿಸಿದ್ದರೆ ಮಕ್ಕಳು ಶಾಲೆಗೆ ಬರುತ್ತಿದ್ದರು ಎಂದಿದ್ದಾರೆ.
ಸ್ಲಗ್: ರಜೆ ಭರ್ತಿಗಾಗಿ ಅಧಿಕಾರಿಗಳ ಎಡವಟ್ಟು
Kshetra Samachara
07/08/2022 03:27 pm