ಉಡುಪಿ: ದಕ್ಷಿಣ ಕನ್ನಡದ ಸುಳ್ಯ ಬೆಳ್ಳಾರೆ ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಇವತ್ತು ಕೊಡವೂರಿನಲ್ಲಿ ಸ್ವಯಂ
ಪ್ರೇರಿತ ಬಂದ್ ನಡೆಸಲಾಗಿದೆ.
ಇಲ್ಲಿನ ಬಹುತೇಕ ಅಂಡಿಮುಂಗಟ್ಟುಗಳನ್ನು ಬಂದ್ ಮಾಡಲಾಗಿದೆ.ಈ ಮೂಲಕ ಕೊಡವೂರು ಪೇಟೆಯ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತರಾಗಿ ಮುಚ್ಚಿದ ವ್ಯಾಪಾರಿಗಳು ಮೃತ ಪ್ರವೀಣ್ ಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಬೆಳಿಗ್ಗೆ 9 ರಿಂದ ಮಧ್ಯಾಹ್ನ 3 ಗಂಟೆವರೆಗೆ ಸಂಪೂರ್ಣ ಬಂದ್ ಆಗಿದ್ದು ಮೂರರ ಬಳಿಕ ಅಂಗಡಿ ಮುಂಗಟ್ಟುಗಳು ತೆರೆದಿವೆ.
ಈ ಅವಧಿಯಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಭದ್ರತಾ ಕ್ರಮ ಕೈಗೊಂಡಿದ್ದರು.
Kshetra Samachara
30/07/2022 03:23 pm