ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಪರಿಸರ ಕಾಳಜಿಗೆ ಪಣ ತೊಟ್ಟ ನ್ಯಾಯಪಾಲರಿಂದ ಬೀಚ್ ಸ್ವಚ್ಛತೆ

ಕುಂದಾಪುರ: ಕುಂದಾಪುರದ ನ್ಯಾಯಾಧೀಶರು ಮತ್ತು ವಕೀಲರು ಕಡಲ ತೀರ ಸ್ವಚ್ಛತೆಯಲ್ಲಿ ಭಾಗಿಯಾಗುವ ಮೂಲಕ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ.

ಪರಿಸರ ದಿನಾಚರಣೆಯ ಅಂಗವಾಗಿ ಕುಂದಾಪುರದ ಕೋಡಿ ಬೀಚ್‍ನಲ್ಲಿ ಆಯೋಜಿಸಿದ ಸ್ವಚ್ಛತಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಕುಂದಾಪುರದ ಸತ್ರ ನ್ಯಾಯಲಯದ ನ್ಯಾಯಾಧೀಶ ಅಬ್ದುಲ್ ರಹೀಂ ಹುಸೇನ್ ಶೇಖ್ ಸ್ವತಃ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾದರು. ಕುಂದಾಪುರದ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ, ಕುಂದಾಪುರ ವಕೀಲರ ಸಂಘ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಈ ಕಾರ್ಯಕ್ರಮ ಆಯೋಜಿಸಿತ್ತು.

ಕುಂದಾಪುರದ ವಕೀಲರ ಸಂಘ ಮೊದಲಿನಿಂದಲೂ ಸಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬಂದಿರುವ ಸಂಸ್ಥೆ. ಈ ಬಾರಿ ಪರಿಸರ ಕಾಳಜಿಗೆ ಇಳಿದಿರುವ ಸಂಸ್ಥೆ ಪರಿಸರ ದಿನಾಚರಣೆಯಂದು ಬೀಚ್ ಸ್ವಚ್ಛತೆ ಮಾಡುವ ಮೂಲಕ ಈ ಸಾಲಿನ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆರಂಭಿಸಿದೆ.

Edited By : Shivu K
Kshetra Samachara

Kshetra Samachara

06/06/2022 01:01 pm

Cinque Terre

11.72 K

Cinque Terre

0

ಸಂಬಂಧಿತ ಸುದ್ದಿ