ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಕಳ ಬ್ರೇಕಿಂಗ್ ನ್ಯೂಸ್; ನಾಥೂರಾಮ್ ಗೋಡ್ಸೆ ನಾಮಫಲಕ ತೆರವು- ಸ್ಥಳಕ್ಕೆ ಪೊಲೀಸರ ದೌಡು!

ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳದ ಬೋಳ ಗ್ರಾಮದಲ್ಲಿ ಗಾಂಧಿ ಹಂತಕ ನಾಥುರಾಮ್ ಗೋಡ್ಸೆ ಹೆಸರನ್ನು ಕಿಡಿಗೇಡಿಗಳು ರಸ್ತೆಗೆ ನಾಮಕರಣ ಮಾಡಿದ್ದು ಭಾರಿ ವಿವಾದಕ್ಕೆ ಕಾರಣವಾಗಿದ್ದು, ಇವತ್ತು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪಂಚಾಯತ್ ಅಧಿಕಾರಿಗಳ ಸಮಕ್ಷಮ ನಾಮಫಲಕ ತೆರವುಗೊಳಿಸಿದರು.

ಬೋಳ ಗ್ರಾಮಪಂಚಾಯತ್ ಅಧಿಕಾರಿಗಳ ಉಪಸ್ಥಿತಿಯಲ್ಲಿ ವಿವಾದಾಸ್ಪದ ಬೋರ್ಡ್ ತೆರವುಗೊಳಿಸಲಾಗಿದೆ. ಇದಕ್ಕೂ ಮುನ್ನ ಸ್ಥಳಕ್ಕೆ ಆಗಮಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯ ಎಚ್ಚರಿಕೆ ನೀಡಿದ್ದರು. ನಾಮಫಲಕದ ಫೋಟೋ ವೈರಲ್ ಆಗುತ್ತಿದ್ದಂತೆ ಕಾರ್ಯಾಚರಣೆಗಿಳಿದ ಪೊಲೀಸರು ವಿಷಯದ ಗಂಭೀರತೆ ಅರಿತು ಸ್ಥಳಕ್ಕೆ ಆಗಮಿಸಿ ಮುಂದೆ ಆಗಬಹುದಾದ ಅಹಿತಕರ ಘಟನೆ ತಪ್ಪಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

06/06/2022 12:42 pm

Cinque Terre

8.68 K

Cinque Terre

5

ಸಂಬಂಧಿತ ಸುದ್ದಿ