ಉಡುಪಿ: ನನಗೆ ಮತ್ತು ರೇಶಂ ಗೆ ಪರೀಕ್ಷೆ ಬರೆಯಲು ನಿನ್ನೆ ಕಾಲೇಜಿನವರು ನಿರಾಕರಿಸಿದ್ದಾರೆ.ನಾವು ಮತ್ತೆ ಮತ್ತೆ ನಿರಾಸೆಗೆ ಒಳಗಾಗುತ್ತಿದ್ದೇವೆ.ಕ್ರಿಮಿನಲ್ ಕೇಸು, ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವುದಾಗಿ ಶಾಸಕ ರಘುಪತಿ ಭಟ್ ಬೆದರಿಕೆ ಹಾಕಿದ್ದಾರೆ.
ಕ್ರಿಮಿನಲ್ ಕೇಸು ಹಾಕಲು ಇಲ್ಲಿ ಯಾವ ಅಪರಾಧ ನಡೆದಿದೆ? ನಮ್ಮ ದೇಶ ಎತ್ತ ಸಾಗುತ್ತಿದೆ? ಎಂದು ಉಡುಪಿಯ ಸರಕಾರಿ ಪದವಿಪೂರ್ವ ಬಾಲಕಿಯರ ಕಾಲೇಜಿನ ವಿದ್ಯಾರ್ಥಿನಿ ಆಲಿಯಾ ಅಸಾದಿ ಟ್ವೀಟ್ ಮಾಡಿದ್ದಾಳೆ.
ನಿನ್ನೆ ಈಕೆ ಮತ್ತು ರೇಶಂ ಹಿಜಾಬ್ ಧರಿಸಿಯೇ ಪರೀಕ್ಷೆ ಬರೆಯುತ್ತೇವೆ ಎಂದು ಪಟ್ಟು ಹಿಡಿದಿದ್ದರು.ಆದರೆ ಕಾಲೇಜು ಇದಕ್ಕೆ ಅನುಮತಿ ನೀಡಿರಲಿಲ್ಲ.
Kshetra Samachara
23/04/2022 09:25 am